ಉಡುಪಿ: ಪಾರ್ಕಿಂಗ್ ಏರಿಯಾದಲ್ಲಿ 10ಕ್ಕೂ ಹೆಚ್ಚು ಅಕ್ರಮ ಅಂಗಡಿ ನಿರ್ಮಾಣ

ಉಡುಪಿ: ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ನಗರ ಸಭೆ ಅನುಮತಿ ಇಲ್ಲದೆ ಅನಧಿಕೃತವಾಗಿ ತಲೆ ಎತ್ತುತ್ತಿರುವ ಅಂಗಡಿಗಳ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ.

ಈ ಪರಿಸರದಲ್ಲಿ 10 ಕ್ಕೂ ಹೆಚ್ಚು ಅಂಗಡಿಗಳು ನಿರ್ಮಾಣಗೊಳ್ಳುತ್ತಿದೆ. ಇದರಿಂದ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಹಾಗೂ ಪ್ರವಾಸಿಗರ ವಾಹನ ನಿಲುಗಡೆಗೆ ಅಡ್ಡಿಯಾಗುತ್ತದೆ. ಅಲ್ಲದೆ, ಈ ಜಾಗ ಒಳಚರಂಡಿ ಪೈಪ್ ಲೈನ್ ಇರುವ ಸ್ಥಳವಾಗಿದೆ. ಆದರೆ ಇಲ್ಲಿ ಅಂಗಡಿ ನಿರ್ಮಾಣ ಮಾಡಲು ಮುಂದಾಗಿರುವ ಸಮಿತಿ ಈ ಬಗ್ಗೆ ನಗರ ಸಭೆಯಿಂದ ಯಾವುದೇ ಅನುಮತಿಯಾಗಲಿ, ಪರವಾನಿಗೆಯಾಗಲಿ ಪಡೆದಿಲ್ಲ. ಅಕ್ರಮವಾಗಿ ಅಂಗಡಿಗಳ ನಿರ್ಮಾಣವನ್ನು ವಿರೋಧಿಸಿ ಸ್ಥಳೀಯರು ನಗರ ಸಭೆಗೆ ದೂರನ್ನು ನೀಡಿದ್ದರು.

ಅಲ್ಲದೆ ಈ ಅಂಗಡಿಗಳನ್ನು ತೆರವು ಗೊಳಿಸುವಂತೆ ಈಗಾಗಲೇ ನಗರ ಸಭೆ ನೋಟೀಸ್ ನೀಡಿದರೂ ಈ ವರೆಗೂ ಅಂಗಡಿಗಳನ್ನು ತೆರವು ಗೊಳಿಸಿಲ್ಲ. ಈಗಾಗಲೇ ಈ ಪರಿಸರದಲ್ಲಿ ಪಾರ್ಕಿಂಗ್ ಏರಿಯಾದಲ್ಲಿ ಪ್ರವಾಸಿಗರ ವಾಹನ ನಿಲುಗಡಗೆ ಸೂಕ್ತ ಸ್ಥಳಾವಕಾಶ, ರಸ್ತೆ ನಿರ್ಮಾಣ, ವಿದ್ಯುತ್ ದೀಪಗಳನ್ನು ನಗರಸಭೆ ಅಳವಡಿಸಿದೆ.

ಈ ಪರಿಸದಲ್ಲಿ ವಾಹನ ಪಾರ್ಕಿಂಗ್ ಮಾಡುವ ಪ್ರವಾಸಿಗರಿಂದ ಸಮಿತಿ ಪಾರ್ಕಿಂಗ್ ಶುಲ್ಕ ಪಡೆಯುತ್ತಿದ್ದರೂ ಇದರಿಂದ ನಗರ ಸಭೆಗೆ ಯಾವುದೇ ಆದಾಯವಿಲ್ಲವಾಗಿದೆ.
ನಗರ ಸಭೆಯ ಅನುಮತಿ ಇಲ್ಲದೆ ನಿರ್ಮಿಸುತ್ತಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!