ಫೆ.28 ಹಿರ್ಗಾನದಲ್ಲಿ ಕರ್ನಾಟಕ ಯುವ ಸಾಹಿತ್ಯ ಸಮ್ಮೆಳನ – ಅಧ್ಯಕ್ಷರಾಗಿ ಮಂಜುನಾಥ ಕಾಮತ್ ಆಯ್ಕೆ

ಅಜೆಕಾರು: ಆದಿಗ್ರಾಮೋತ್ಸವ ಸಮಿತಿಯು, ಆಖಿಲ ಕನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಲಯನ್ಸ್ ಕ್ಲಬ್ ಮುನಿಯಾಲು ಸಹಯೋಗದೊಂದಿಗೆ ಹಿರ್ಗಾನ ಬಿ.ಎಂ ಶಾಲೆಯಲ್ಲಿ ಫೆ. 28 ರಂದು ಆಯೋಜಿಸಿರುವ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೊರ್ಗಲ್‌ಗುಡ್ಡೆ ಮಂಜುನಾಥ ಕಾಮತ್ ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಸಂಘಟಕ ಡಾ. ಶೇಖರ ಅಜೆಕಾರು ತಿಳಿಸಿದ್ದಾರೆ.

ಸೃಜನಶೀಲ ಬರಹಗಳಿಂದ ಮತ್ತು ಕೃತಿಗಳನ್ನು ಜನ ಸಾಮಾನ್ಯರಿಗೂ ಪರಿಚಯಿಸುವ ವಿಶಿಷ್ಟತೆ ಹೊಂದಿರುವ ಮಂಜುನಾಥ ಅವರು ಪಂಡಿತಾ, ದಾರಿ ತಪ್ಪಿಸು ದೇವರೇ, ನಾನು ಸನ್ಯಾಸಿಯಾಲು ಹೊರಟದ್ದು ಮತ್ತು ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕಥೆ ಇವು ಅವರ ಬಹುಚರ್ಚಿತ ಕೃತಿಗಳಾಗಿವೆ. ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಆಗಿರುವ ಅವರು ಕರ್ನಾಟಕ ಕೊಂಕಣಿ ಅಕಾಡೆಮಿಯ 1 ಲಕ್ಷ ರೂಪಾಯಿಯ ಫೆಲೋಶಿಫ್ ಪಡೆದಿದ್ದಾರೆ.

ಯುವಕರೇ ವೇದಿಕೆ ಹಂಚಿಕೊಳ್ಳುವ ವಿನೂತನ ಕಲ್ಪನೆಯ ಸಮ್ಮೇಳನದಲ್ಲಿ ಮಧ್ಯಾಹ್ನ ಹಿರಿಯರಿಂದ ಕಿರಿಯರಿಗೆ ಮಾರ್ಗದರ್ಶನ ಮತ್ತು ಅವರ ಯಶಸ್ಸಿನ ಕಥೆ ಹೇಳುವ ಕಾರ್ಯಕ್ರಮ ಅನುಭಾವ ಗೋಷ್ಠಿ, ಸಮ್ಮೇಳನದ ವಿಶೇಷತೆಯಾಗಿದೆ. ಕವಿಗೋಷ್ಠಿ, ಕನ್ನಡ ಗಾಯನ, ಭರತನಾಟ್ಯ, 6 ವರ್ಷ ಕೆಳಗಿನ ಮಕ್ಕಳ ಪುಟಾಣಿ ವಂಡರ್ ಶೋ, ರೂಪಾ ವಸುಂಧರಾ ಆಚಾರ್ಯ ಅವರ  ಪುಷ್ಪಾಂಜಲಿ ಕಲಾ ಪ್ರದರ್ಶನವಿದೆ.

ಅನುಭಾವ ಗೋಷ್ಠಿಯಲ್ಲಿ ಅನುಭವ ಹಂಚಿಕೊಳ್ಳುವ ಮತ್ತು ಭಾರತ ಸಾಧನಾ ಗೌರವಕ್ಕೆ ಪಾತ್ರವಾಗುವ ಗಣ್ಯರು: ಕೆ.ಜಯಪ್ರಕಾಶ ಹೆಗ್ಡೆ, ಕೆ.ಅಭಯಚಂದ್ರ ಜೈನ್, ದೇವಸ್ಯ ಶಿವರಾಮ ಶೆಟ್ಟಿ, ಮುಂಬಯಿ ಉದ್ಯಮಿ-ಸಂಘಟಕ ಗುಣಪಾಲ ಕಡಂಬ, ಆಧುನಿಕ ಕಂಬಳಗಳ ರೂವಾರಿಗಳು ಹರಿಪ್ರಸಾದ್ ರೈ, ಬೆಳ್ಳಿಪಾಡಿ ಮಣಿಪಾಲ, ಉದ್ಯಮಿ ಮತ್ತು ಸಂಘಟಕ ರಾಮಚಂದರ್ ಬೈಕಂಪಾಡಿ, ಸಾಹಿತಿಗಳು, ಮಂಗಳೂರು, ಶೀಲಾ.ಕೆ, ಶೆಟ್ಟಿ, ಉಡುಪಿ ರಾಜಕಾರಣಿ, ಜನಪ್ರತಿನಿಧಿ ಆರೂರು ತಿಮ್ಮಪ್ಪ ಶೆಟ್ಟಿ, ದೈಹಿಕ ಶಿಕ್ಷಕರು ಮತ್ತು ಸಂಘಟಕರು ಶಿರಿಯಣ್ಣ ಶೆಟ್ಟಿ, ಹಿರಿಯ ಸಹಕಾರ ದುರೀಣರು ತಿರುವೈಲು ಗುತ್ತು ನವೀನ್‌ಚಂದ್ರ ಆಳ್ವ, ಕಂಬಳ ಕ್ಷೇತ್ರದ ಸಾಧಕರು, ಕೆ.ಪಿ.ಪದ್ಮಾವತಿ, ಸಣ್ಣ ಉಳಿತಾಯ ಮತ್ತು ಮಹಿಳಾ ಸಾಧಕಿ ಅಶೋಕ್ ಕುಮಾರ್ ಕಾಸರಗೋಡು, ಸಾಹಿತಿ, ಚಿತ್ರ ನಟ ರಾಜವರ್ಮ ಬೈಲಂಗಡಿ, ಹಿರಿಯ ಪ್ರಗತಿ ಪರ ಕೃಷಿಕರು ಬೋಳ ಪ್ರಭಾಕರ ಕಾಮತ್, ಹಿರಿಯ ಉದ್ಯಮಿಗಳು ಐ.ವಿ.ಸೋನ್ಸ್ ಬನ್ನಡ್ಕ ಮೂಡುಬಿದಿರೆ, ಕೃಷಿ ಸಾಧಕರು ಮಿತ್ರಪ್ರಭ ಹೆಗ್ಡೆ, ಕಾರ್ಕಳ, ನಿವೃತ್ತ ಪ್ರಾಂಶುಪಾಲರು- ಸಂಘಟಕಿ ಕೆ ಮಹಾಬಲೇಶ್ವರ ಆಚಾರ್ಯ, ಉಡುಪಿ, ಸಮಾಜ ಸೇವಕರು ಪ.ರಾಮಕೃಷ್ಣ ಶಾಸ್ತ್ರಿ, ಬೆಳ್ತಂಗಡಿ, ಹಿರಿಯ ಸಾಹಿತಿಗಳು ಭಾಸ್ಕರ ಜೋಯಿಸ್ ಹೆಬ್ರಿ, ಉದ್ಯಮಿ ಮತ್ತು ಸಮಾಜ ಸೇವಕರು ಯೋಗೀಶ್ ಭಟ್ ಹೆಬ್ರಿ, ಜವಳಿ ವರ್ತಕರ ಸಂಘದ ಉಭಯ ಜಿಲ್ಲಾಧ್ಯಕ್ಷರು ಭುವನ ಪ್ರಸಾದ್ ಹೆಗ್ಡೆ ಮಣಿಪಾಲ, ಸಂಘಟಕರು ಉದ್ಯಾವರ ನಾಗೇಶ್ ಕುಮಾರ್- ರಂಗಕರ್ಮಿ ಕೆ.ಪದ್ಮಾಕರ ಭಟ್- ಹಿರಿಯ ಪತ್ರಕರ್ತರು ನಿತ್ಯಾನಂದ ಪೈ, ಕಾರ್ಕಳ- ಸಿನಿಮಾ ನಿರ್ಮಾಪಕರು.
ಎ.ನರಸಿಂಹ ಬೊಮ್ಮರಬೆಟ್ಟು, ಶಿಕ್ಷಣ ತಜ್ಞರು ಕೆ.ಕರುಣಾಚಂದ್ರ, ನಿವೃತ್ತ ಜಿಲ್ಲಾ ಯುವಜನ ಅಧಿಕಾರಿ ನರಸಿಂಹ ಮೂರ್ತಿ ರಾವ್, ಉಡುಪಿ, ಸಾಹಿತ್ಯ ಪರಿಚಾರಿಕೆ ನಾರಾಯಣ ಶೆಟ್ಟಿ ಮುಂಬಯಿ, ಮುದ್ರಣ ಕ್ಷೇತ್ರ, ಸದಾನಂದ ನಾಯಕ್ ಮುಂಬಯಿ, ಯಕ್ಷಗಾನ ಕಲಾವಿದ

1 thought on “ಫೆ.28 ಹಿರ್ಗಾನದಲ್ಲಿ ಕರ್ನಾಟಕ ಯುವ ಸಾಹಿತ್ಯ ಸಮ್ಮೆಳನ – ಅಧ್ಯಕ್ಷರಾಗಿ ಮಂಜುನಾಥ ಕಾಮತ್ ಆಯ್ಕೆ

Leave a Reply

Your email address will not be published. Required fields are marked *

error: Content is protected !!