ಫೆ.20-21: ಕಿದಿಯೂರು-ಕಡೆಕಾರ್ ಶ್ರೀಬ್ರಹ್ಮಲಿಂಗೇಶ್ವರ ಹಾಗೂ ನಾಗಸ್ಥಾನದ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಉಡುಪಿ: ಕಿದಿಯೂರು – ಕಡೆಕಾರ್ ಶ್ರೀಬ್ರಹ್ಮಲಿಂಗೇಶ್ವರ ಹಾಗೂ ನಾಗಸ್ಥಾನದ, ಶ್ರೀ ಬ್ರಹ್ಮಲಿಂಗೇಶ್ವರ, ನಾಗ ಹಾಗೂ ಪರಿವಾರ ದೇವರ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ, ಬ್ರಹ್ಮ ದರ್ಶನ, ಆಶ್ಲೇಷ ಬಲಿ, ಮಹಾ ಅನ್ನ ಸಂತರ್ಪಣೆ ಹಾಗೂ ನಾಗ ತನು ತರ್ಪಣ ಸೇವೆ ಫೆ. 20 ಮತ್ತು ಫೆ.21 ರಂದು ನಡೆಯಲಿದೆ ಎಂದು ಅಧ್ಯಕ್ಷ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, 2 ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಅಲೆವೂರು ರಾಘವೇಂದ್ರ ಕೊಡಂಚ ಅವರ ನಿರ್ದೇಶನದಲ್ಲಿ ನಡೆಯಲಿದೆ.

ಧಾರ್ಮಿಕ ಕಾರ್ಯ ಕ್ರಮಗಳ ಮೊದಲದಿನ ಫೆ.20 ರಂದು ಸಂಜೆ 5ಗಂಟೆಯಿಂದ ಪುಣ್ಯಾಹ, ಪಂಚಗವ್ಯ, ಸಪ್ತಶುದ್ಧಿ, ಭೂಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತುಬಲಿ, ದಿಕ್ಪಾಲ ಬಲಿ, ಬಿಂಬ ಶಯ್ಯಾಧಿವಾಸ, ಭಜನಾ ಕಾರ್ಯಕ್ರಮಗಳು ನಡೆಯಲಿದೆ.

ಫೆ.21 ರಂದು ಬೆಳಿಗ್ಗೆ ಗಂಟೆ 8.30ಕ್ಕೆ ಒದಗುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ, ನಾಗ ಹಾಗೂ ಪರಿವಾರ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪ್ರಧಾನ ಹೋಮ, ಪ್ರಾಯಶ್ಚಿತ್ತ ಹೋಮ, ಆಶ್ಲೇಷಬಲಿ ಹಾಗೂ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ವಟು ಆರಾಧನೆ ನಡೆಯಲಿದೆ.

ಅದೇ ದಿನ ಬೆಳಿಗ್ಗೆ 11 ಗಂಟೆಗೆ ಬ್ರಹ್ಮ ದರ್ಶನ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ಹಾಗೂ ಸಂಜೆ 5 ಗಂಟೆಗೆ ಪರಿವಾರ ದೇವತೆಗಳಿಗೆ ಭೋಗ ಸೇವೆ, ದೀಪಾರಾಧನೆ ನಾಗ ತನು ತರ್ಪಣ ಸೇವೆ ನಡೆಯಲಿದೆ. ಇನ್ನು ರಾತ್ರಿ 7 ಗಂಟೆಯಿಂದ ಪುಣ್ಯಾಹ, ಪಂಚಗವ್ಯ ಸೇವೇಗಳು ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ರಾಜೇಶ್ ಡಿ ಪಾಲನ್, ಅನುವಂಶಿಕ ಮೊಕ್ತೇಸರರು ಶಂಕರ ನಾರಾಯಣ ಭಾಗವತ, ಕಾರ್ಯದರ್ಶಿ ಮಹೇಶ್ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!