ಯು.ಟಿ.ಖಾದರ್ ಸಹೋದರ ಇಫ್ತಿಕಾರ್ ಮನೆಗೆ ಆದಾಯ ತೆರಿಗೆ ಇಲಾಖೆ ದಾಳಿ

ಮಂಗಳೂರು: ಶಾಸಕ ಯು.ಟಿ.ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರ ಮನೆಗೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಫ್ತಿಕಾರ್ ಅಲಿ ಅವರ ಮಂಗಳೂರಿನ ಲೈಟ್‍ಹೌಸ್‍ನ ಅಪಾರ್ಟ್‍ಮೆಂಟ್ ವೊಂದರಲ್ಲಿ ಇರುವ ಫ್ಲ್ಯಾಟ್‍ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಫೆ.17 ರಂದು, ಐಟಿ ಅಧಿಕಾರಿಗಳು ಮಂಗಳೂರಿನ ಉದ್ಯಮಿಗಳಿಗೆ ಸೇರಿದ ಸಂಸ್ಥೆಗಳ ಮೇಲೆ ನಡೆಸಿದ್ದರು. ಅದರ ಭಾಗವಾಗಿಯೇ ಯು.ಟಿ. ಇಫ್ತಿಕಾರ್ ಮನೆಗೂ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಗೊಳಗಾದ ಸಂಸ್ಥೆಗಳಲ್ಲಿ ಇಫ್ತಿಕಾರ್‍ಗೆ ಪಾಲುದಾರಿಕೆ ಇತ್ತು ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!