ಉಡುಪಿ: ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಪದ್ಮನಾಭ ಭಂಡಾರಿ (63) ನಾಪತ್ತೆಯಾದವರು. ಇವರು ಉಡುಪಿಯ ಅಂಬಲಪಾಡಿಯಲ್ಲಿ ವಾಸವಿದ್ದು, ಫೆ.17 ರಂದು ತನ್ನ ಅಣ್ಣನ ಅಂಗಡಿಗೆ ಕಾರಿನಲ್ಲಿ ಹೋಗಿದ್ದಾರೆ. ಆದರೆ ಆ ಬಳಿಕ ವಾಪಸ್ಸು ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.