ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಲಶಾಭಿಷೇಕ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಲಶಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯುತ್ತಿದೆ. ಫೆ. 13 ರಂದು ಆರಂಭಗೊಂಡಿರುವ ಈ ದಾರ್ಮಿಕ ಕಾರ್ಯಕ್ರಮದಲ್ಲಿ 5 ದಿನಗಳ ಕಾಲ ಪ್ರಾರ್ಥನೆ, ಪುಣ್ಯಹ ನಾಂದಿ, ಕಂಕಣಬಂಧ, ಪ್ರಾಯಶ್ಚಿತ್ತ ಪವಮಾನ ಹೋಮ, ಅಥರ್ವಶೀರ್ಷಹವನ, ಪ್ರಸನ್ನಪೂಜೆ ಮೊದಲಾದ ಪೂಜಾ ಕಾರ್ಯಕ್ರಮಗಳು ನಡೆದವು.

ಧಾರ್ಮಿಕ ಕಾರ್ಯಕ್ರಮದ 6 ನೇ ದಿನವಾದ ಇಂದು (ಫೆ.18) ಬೆಳಗ್ಗೆ 5 ಗಂಟೆಗೆ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಪುಣ್ಯಾಹ, ಗಣಪತಿಹವನ, ಎಲ್ಲಾ ದೇವರುಗಳಿಗೆ ಶಾಂತಿ ಪ್ರಾಯಶ್ಚಿತ್ತ ಹವನಗಳು, ಚೋರಶಾಂತಿ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಹಸ್ರಕದಲೀ ಹವನ, ಕೊಡಮಣಿತ್ತಯ ದೈವದ ಕಲಾಶಾಭಿಷೇಕ, ಕ್ಷೇತ್ರಪಾಲನಿಗೆ ಕಲಶಾಭಿಷೇಕ, ಉಳ್ಳಾಕ್ಲು-ಮಗೃಂತ್ತಾಯಿ ದೈವಕ್ಕೆ ಕಲಶಾಭಿಷೇಕ, ಪ್ರಸನ್ನ ಪೂಜೆ ಹಾಗೂ ಸಂಜೆ 4.30ಕ್ಕೆ ಕ್ಷೇತ್ರಪಾಲಾಧಿವಾಸ ಹೋಮಗಳು,ಕಲಶಾಧಿವಾಸ, ಶ್ರೀ ಚಕ್ರಪೂಜೆ, ಲಲಿತಾ ಸಹಸ್ರನಾಮ ಹವನ,ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ, ಕಲಶ ಮಂಟಪ ಸಂಸ್ಕಾರ ನಡೆಯಲಿದೆ.

ಇನ್ನು ಫೆ. 21ರ ವರೆಗೆ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಅಧ್ಬುತ ಶಾಂತಿಹೋಮ, ಸ್ವಶಾಂತಿ ಹೋಮ, ಹೋಮಕಲಶಾಭಿಷೇಕ, ತತ್ತ್ವ ಕಲಶಾಭಿಷೇಕ, ಕ್ಷೇತ್ರಪಾಲ ಪ್ರತಿಷ್ಠೆ, ವಿಷ್ಣುಸಹಸ್ರನಾಮ ಹವನ, ದುರ್ಗಾಹೋಮ, ಕುಂಬೇಶ ಕರ್ಕರಿ ಪೂಜೆ, ಮಂಡಲ ರಚನೆ, ಪ್ರಸನ್ನ ಪೂಜೆ, ಶ್ರೀ ರಾಜರಾಜೇಶ್ವರೀ ದೇವರಿಗೆ 501 ಕಲಶಾಧಿವಾಸ, ಅಧಿವಾಸಹವನಗಳು, ಪರಿವಾರ ದೇವರುಗಳಿಗೆ 108 ಕಲಶಾಧಿವಾಸ, ಅಧಿವಾಸಹವನಗಳು, ದುರ್ಗಾಪೂಜೆ, ನಿತ್ಯ ಪೂಜೆ,ದೊಡ್ಡ ರಂಗಪೂಜೆ, ಉತ್ಸವ ಬಲಿ, ಚಂದ್ರಮಂಡಲ, ಷಷ್ಠಿರಥ, ಬೆಳ್ಳಿರಥೋತ್ಸವ, ಅಷ್ಟಾವಧಾನಸೇವೆ, ಪಲ್ಲಕಿ ಉತ್ಸವಗಳು ನಡೆಯಲಿದೆ.
ಫೆ.21 ರಂದು ಬೆಳಗ್ಗೆ 6 ಗಂಟೆಗೆ ಪುನ್ಯಾಹ, ಮಂಗಳ ಗಣಪತಿ, ಹವನ, ಕಲಶಪೂಜೆ, ಕಲಶಾಭಿಚೇಕ, ಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ ನಡೆಯಲಿದೆ. ಇದರೊಂದಿಗೆ ಕಲಶಾಭಿಷೇಕದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಎಲ್ಲಾ ದಿಗಳಲ್ಲಿಯೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!