ಕಡಿಯಾಳಿ: ಸುಬ್ರಮಣ್ಯ ಹಾಗೂ ನಾಗದೇವರ ಗುಡಿಗೆ ಶಿಲಾನ್ಯಾಸ
ಉಡುಪಿ: ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದ ಜೀರ್ಣೋದ್ದಾರ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿರುವ ಸುಬ್ರಮಣ್ಯ ಹಾಗೂ ನಾಗದೇವರ ಗುಡಿಯ ರಚನೆಗೊಳ್ಳಲಿರುವ ನೂತನ ಶಿಲಾಮಯ ರಚನೆಗೆ ಶಿಲಾನ್ಯಾಸ ನಡೆಯಿತು. ಉಡುಪಿ ಸಗ್ರಿಯ ಪ್ರಸಿದ್ಧ ನಾಗ ಪಾತ್ರಿಗಳಾದ ಸಗ್ರಿ ಗೋಪಾಲ ಕೃಷ್ಣ ಸಾಮಗ ಅವರು ಶಿಲನ್ಯಾಸ ನೆರವೇರಿಸಿದರು.
ಈ ವೇಳೆ ಕಡಿಯಾಳಿ ಕಾತ್ಯಾಯನಿ ಮಂಟಪದ ಪರವಾಗಿ ಕೆ .ಮುರಳಿಕೃಷ್ಣ ಉಪಾಧ್ಯಾಯ 5 ಲಕ್ಷ ರೂಪಾಯಿ, ಶ್ರೀದೇವರ ಆರ್ಚಕರಾದ ಕಡಿಯಾಳಿ ಕೆ. ರತ್ನಾಕರ ಉಪಾಧ್ಯಾಯ 1 ಲಕ್ಷ ರೂಪಾಯಿ, ಕಡಿಯಾಳಿಯ ಜೀವರತ್ನ ದೇವಾಡಿಗ 56,565 ರೂ. ಮೊತ್ತವನ್ನು ಜೀರ್ಣೋದ್ಧಾರ ಕಾರ್ಯಕ್ಕೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ನಾಗೇಶ್ ಹೆಗ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾದ ಯು.ಮೋಹನ ಉಪಾಧ್ಯಾಯ ಭಾಗವಹಿಸಿದ್ದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ .ರಾಘವೇಂದ್ರ ಕಿಣಿ, ಸತೀಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.