ನಮ್ಮ ಸಂಸ್ಕೃತಿ ನಾಶ ಮಾಡಿ, ಮತಾಂತರ ಮಾಡುವ ವ್ಯಾಲೆಂಟೈನ್ಸ್ ಡೇ ಗೆ ಬಜರಂಗದಳ ವಿರೋಧ
ಉಡುಪಿ: ದೇಶದಾದ್ಯಂತ ಆಚರಿಸುವ ಫೆ.14 ರ ವ್ಯಾಲೆಂಟೈನ್ಸ್ ಡೇಗೆ ಬಜರಂಗದಳ ವಿರೋಧ ವ್ಯಕ್ತ ಪಡಿಸಿದೆ. ಈ ಬಗ್ಗೆ ಬಜರಂಗದಳ ಕರ್ನಾಟಕ ದಕ್ಷಿಣದ ಸಂಯೋಜಕ ಸುನಿಲ್ ಕೆ ಆರ್ ಮಾಹಿತಿ ನೀಡಿದ್ದು, ಈ ಪ್ರೇಮಿಗಳ ದಿನಾಚರಣೆಯ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಇದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ. ಯುವ ಸಮಾಜ ಈ ದಿನವನ್ನು ಪುಲ್ವಾಮದಲ್ಲಿ ಭಯೋತ್ಪಾದಕರಿಂದ, ಈ ದೇಶಕೋಸ್ಕರ ಬಲಿದಾನ ಮಾಡಿದ ನಮ್ಮ ವೀರ ಸೈನಿಕರನ್ನು ನೆನೆಯುತ್ತ ಹುತಾತ್ಮ ದಿನವನ್ನಾಗಿ ಆಚರಿಸೋಣ ಎಂದು ಕರೆ ನಿಡಿದ್ದಾರೆ.
ಜಗತ್ತಿಗೆ ಜೀವನ ಹೇಗಿರಬೇಕು ಹೇಗೆ ಬದುಕಬೇಕು ಎಂದು ಹೇಳಿಕೊಟ್ಟ ದೇಶ ಭಾರತ. ನಮ್ಮ ದೇಶ ಒಂದು ದೇವಭೂಮಿ, ನಮ್ಮ ಸಂಸ್ಕøತಿ ಸಂಸ್ಕಾರ ಗಳಿಗೆ ಜಗತ್ತಿನಲ್ಲಿ ಮಹತ್ವವಿದೆ. ಸನಾತನ ಧರ್ಮ ಎಂಬ ಇತಿಹಾಸ ಇದೆ. ಅಂತಹ ಪವಿತ್ರ ನೆಲದ ಮೇಲೆ ನಿರಂತರ ಪಾಶ್ಚಿಮಾತ್ಯರ ದಾಳಿ ನಡೆಯುತ್ತಲೇ ಇದ್ದು, ಈ ನೆಲವನ್ನು ನಮ್ಮ ಸಂಸ್ಕೃತಿ ಯನ್ನು ನಾಶ ಮಾಡಿ ಮತಾಂತರ ಮಾಡುವ ಉದ್ದೇಶ. ಅದರಲ್ಲಿ ಪ್ರೇಮಿಗಳ ದಿನಾಚರಣೆ ವ್ಯಾಲೆಂಟೈನ್ಸ್ ಡೇ ಕೂಡಾ ಒಂದು ಎಂದು ಹೇಳಿದ್ದಾರೆ.