ಆಕ್ಸ್ ಫರ್ಡ್ ವಿ.ವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಉಡುಪಿಯ ರಶ್ಮಿ ಸಾಮಂತ್ ಆಯ್ಕೆ

ಉಡುಪಿ: ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಮಣಿಪಾಲ ಮೂಲದ ರಶ್ಮಿ ಸಮಂತ್ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಆಕ್ಸ್ ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಗೆ ನಾಲ್ಕು ಮಂದಿ ಸ್ಪರ್ಧಿಸಿದ್ದು. ಅಧ್ಯಕ್ಷ ಸ್ಥಾನಕ್ಕಾಗಿ 3,708 ಮತಗಳಲ್ಲಿ 1,966 ಮತಗಳನ್ನು ರಶ್ಮಿ ಪಡೆದರು, ಈ ಮೂಲಕ ಅವರು ಇತರ ಮೂವರು ಸ್ಪರ್ಧಿಗಳ ಒಟ್ಟು ಮತಗಳಿಗಿಂತ ಹೆಚ್ಚು ಮಗಳನ್ನು ಗಳಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡರು. ಫೆಬ್ರವರಿ 11 ರಂದು ರಶ್ಮಿ ಅವರು ಯೂನಿಯನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

     ವತ್ಸಲಾ ಸಾಮಂತ್ ಮತ್ತು ದಿನೇಶ್ ಸಾಮಂತ್ ಅವರ ಮಗಳಾಗಿರುವ ಇವರು. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಲಿನಾಕ್ರೆ ಕಾಲೇಜಿನ ಎಂಎಸ್ಸಿ ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ಮಣಿಪಾಲ ಮತ್ತು ಉಡುಪಿಯಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ಎಂಐಟಿಯಲ್ಲಿ (2016-2020 ಬ್ಯಾಚ್) ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಈ ಸಂಸ್ಥೆಯಲ್ಲಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಎಂಐಟಿಯಲ್ಲಿ ವಿದ್ಯಾರ್ಥಿ ಪರಿಷತ್ತಿನ ತಾಂತ್ರಿಕ ಕಾರ್ಯದರ್ಶಿಯಾಗಿದ್ದರು. ಅಲ್ಲದೆ ಸಾಮಾಜಿಕ ಸವಾಲುಗಳಿಗೆ ಆಧುನಿಕ ಡಿಜಿಟಲ್ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಮಣಿಪಾಲ್ ಹ್ಯಾಕಥಾನ್ ನ್ನು ಪರಿಚಯಿಸಿದ್ದರು. ಇದೀಗ  ತಮ್ಮ ಮಗಳ ಸಾಧನೆಗೆ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!