ಕಾಪು: ಬೈಕ್’ಗೆ ಟೆಂಪೋ ಟ್ರಾವೆಲ್ ಡಿಕ್ಕಿ – ಸವಾರ ಗಂಭೀರ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಬೈಕ್‍ಗೆ ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡ ಘಟನೆ ಉಡುಪಿ ಕಾಪು ಸಮೀಪ ರಾ.ಹೆ. ಯ ವಿದ್ಯಾನಿಕೇತನ ಶಾಲೆಯ ಬಳಿ ಇಂದು ಬೆಳಗ್ಗೆ ನಡೆದಿದೆ.
ಕಾಪು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಬೈಕ್‍ಗೆ, ಕೇರಳದಿಂದ ಕೊಲ್ಲೂರು ಕಡೆ ಸಾಗುತ್ತಿದ್ದ ಟೂರಿಸ್ಟ್ ಟೆಂಪೋ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದಾರೆ. ಬೈಕ್‍ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡಿದ್ದ ಟೆಂಪೋ ಕಂದಕಕ್ಕೆ ವಾಲಿ ನಿಂತಿದೆ. ಘಟನಾ ಸ್ಥಳಕ್ಕೆ ಕಾಪು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.