ಐಕಳ ಕಂಬಳದಲ್ಲಿ ಬೈಂದೂರಿನ ಯುವಕನ ಹೊಸ ದಾಖಲೆ

ಮಂಗಳೂರು: ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕಂಬಳ. ಇದೀಗ ಪ್ರಸಿದ್ಧ ಕಂಬಳ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಮಂಗಳೂರಿನ ಕಿನ್ನಿಗೋಳಿ ಸಮೀಪದ ಐಕಳದಲ್ಲಿ ನಡೆದ ಕಂಬಳದಲ್ಲಿ, ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ ಗಳಲ್ಲಿ 100 ಮೀಟಲ್ ಓಡಿ ಹೊಸ ದಾಖಲೆ ನಿರ್ಮಿಸಿದೆ.

ಕಂಬಳದ ಉಸೇನ್ ಬೋಲ್ಟ್ ಎಂದು ಖ್ಯಾತರಾಗಿದ್ದ ಶ್ರೀನಿವಾಸ್ ಗೌಡರು ಕಳೆದ ವರ್ಷ ಕಂಬಳದಲ್ಲಿ ಕೋಣಗಳನ್ನು  9.55 ಸೆಕೆಂಡ್‍ನಲ್ಲಿ 100 ಮೀಟರ್ ಓಡಿಸಿ ದಾಖಲೆ ಮಾಡಿದ್ದರು. ಇದೀಗ ಇವರ ದಾಖಲೆಯನ್ನು ಮುರಿದಿರುವ ಬೈಂದೂರಿನ ವಿಶ್ವನಾಥ್ ದೇವಾಡಿಗ ಅವರ ಕೋಣಗಳು 9.15 ಸೆಕೆಂಡ್‍ಗಳಲ್ಲಿ 100 ಮೀಟರ್ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದೆ.

 ಕಳೆದ 7 ವರ್ಷಗಳಿಂದ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಇವರು ತಮ್ಮ ಸಾಧನೆ ಕುರಿತು ಅನುಭವಗಳನ್ನು ಹಂಚಿಕೊಂಡಿದ್ದು, ಈ ದಾಖಲೆ ನಿರ್ಮಿಸಲು ತನ್ನ ಜೊತೆಗಿದ್ದವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ಮುಂಬೈ ಕ್ಯಾಂಟೀನ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಸಿಟಿ ಜೀವನಶೈಲಿ ಇಷ್ಟವಿರಲಿಲ್ಲ. ಪೋಷಕರು ಮತ್ತು ಒಡಹುಟ್ಟಿದವರಂತೆ ಕೃಷಿಯಲ್ಲಿ ತೊಡಗಿಸಿಕೊಳ್ಳ ಬೇಕೆಂದುಕೊಂಡಿದ್ದರಿಂದ ಮನೆಗೆ ಬಂದಾಗಲೆಲ್ಲಾ ಕೋಣಗಳನ್ನು ಬೆಳೆಸಲು ಆರಂಭಿಸಿದ್ದೆ. ಕಂಬಳ ಬಗ್ಗೆ ಒಲವು ಹೆಚ್ಚಲು ಸುರೇಶ್ ಕಡಿನಾಟಾರ್ ಮತ್ತು ವೆಂಕಟ್ ಪೂಜಾರಿ ಅವರು ನನಗೆ ಪ್ರೇರಣೆಯಾಗಿದ್ದಾರೆ.

ಚಿಕ್ಕವನಿದ್ದಾಗಿನಿಂದಲೂ ಕಂಬಳವನ್ನು ನೋಡುತ್ತಿದ್ದ ನನಗೆ 2013ರಲ್ಲಿ ನಡೆದಿದ್ದ ಸ್ಪರ್ಧೆ ಪ್ರೇರಣೆ ನೀಡಿತ್ತು ಎಂದು ತಿಳಿಸಿದ್ದಾರೆ.  ಇದೇ ವೇಳೆ, ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಕಂಬಳ ಉತ್ಸಾಹಿಯಾಗಿರುವ ಕಾರ್ಕಳದ ಮಾಳ ಗ್ರಾಮದ ಕರುಣಾಚಾರಿ ಅವರನ್ನು ನೆನೆದಿರುವ ವಿಶ್ವನಾಥ್ ಅವರು, ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲಾ ಮಾಳದಲ್ಲಿರುವ ಕರುಣಾಚಾರಿ ಅವರ ಮನೆಗೆ ತೆರಳುತ್ತಿದ್ದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!