ಟೆಕ್ಸಾಸ್: 100 ವಾಹನಗಳ ಸರಣಿ ಅಪಘಾತ! ಐವರು ಮೃತ್ಯು

ಟೆಕ್ಸಾಸ್: ಮೂರು ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ನಡೆದಿರುವ ಬಗ್ಗೆ ಕೇಳಿದ್ದೇವೆ. ಹೆಚ್ಚು ಅಂದರೆ ಏಕಲಾದಲ್ಲಿ 6 ರಿಂದ 7 ವಾಹನಗಳ ನಡುವೆ ನಡೆದ ಅಪಘಾತದ ಬಗ್ಗೆನೂ ಕೆಲವರು ಕೇಳಿರಬಹದು. ಆದರೆ, ಇಲ್ಲೊಂದು ಕಡೆ ಏಕಕಾಲದಲ್ಲಿ 100 ವಾಹನಗಳ ನಡುವೆ ಪರಸ್ಪರ ಅಪಘಾತ ಸಂಭವಿಸಿದೆ ಅಂದ್ರೆ ನಾವು ನಂಬಲೇಬೇಕು. ಈ ಘಟನೆ ನಡೆದಿರುವುದು ಅಮೇರಿಕಾದ ಟೆಕ್ಸಾಸ್‍ನಲ್ಲಿ.

ಘಟನೆಯಿಂದ ಐವರು ಪ್ರಾಣ ಕಳೆದುಕೊಂಡಿದ್ದಾರೆ. 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ 24 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಅಪಘಾತಕ್ಕಿಡಾದ ವಾಹನಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದೆ.

ಈ ಪ್ರದೇಶದಲ್ಲಿ ಚಳಿಯಿಂದಾಗಿ ಹಿಮಪಾತವಾಗುತ್ತಿರುವ ಕಾರಣ ವಾತಾವರಣ ಹಿಮದಿಂದ ಕೂಡಿದೆ. ಅದ್ದರಿಂದ ದಾರಿ ಕಾಣದೆ ವೇಗವಾಗಿ ಬಂದ ಟ್ರಕ್‍ವೊಂದು ಸಾಲಾಗಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು ಸಿನಿಮೀಯ ರೀತಿಯಲ್ಲಿ ಹಾರಿ ಹೋಗಿವೆ. ಮೊದಲ ಅಪಘಾತದನಂತರ ಉಳಿದ ಒಂದೊಂದೆ ವಾಹನಗಳು ಬಂದು ನಿಂತಿರುವ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಹೀಗೆ ಟ್ರಕ್, ಕಾರುಗಳು ಸೇರಿ 100 ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಅಪಘಾತ ಸಂಭಿವಿಸಿದೆ ಎಂದು ಟೆಕ್ಸಾಸ್ ಪೊಲೀಸರು ಮಾಹಿತಿ ನೀಡಿರೋದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!