ಉಡುಪಿ: ಗೌರವ ಡಾಕ್ಟರೇಟ್ ಪಡೆದ ಯಾದವ್ ಕರ್ಕೇರರಿಗೆ ತುಳುಕೂಟದಿಂದ ಸನ್ಮಾನ
ಉಡುಪಿ: ಮೊಗವೀರರ ಸಾಂಸ್ಕೃತಿಕ ಬದುಕು ಹಾಗೂ ಆರ್ಥಿಕ ಚಿಂತನೆ ” ಎಂಬ ತುಳುಭಾಷೆಯ ಸಂಶೋಧನಾ ಮಹಾ ಪ್ರಬಂಧಕ್ಕಾಗಿ, ಆಂಧ್ರಪ್ರದೇಶದ ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ತುಳುಕೂಟ ಉಡುಪಿಯ ಸಂಚಾಲಕರೂ ಹಾಗೂ ಸಕ್ರಿಯ ಸದಸ್ಯರೂ ಆಗಿರುವ ಯಾದವ್.ವಿ. ಕರ್ಕೇರಾ ಇವರನ್ನು , ತುಳುಕೂಟ ಉಡುಪಿ ಇದರ ವತಿಯಿಂದ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸನ್ಮಾನಿಸಲಾಯಿತು.
ತುಳುಕೂಟದ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ.ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.