ಮುಸ್ಲಿಂ ಹೆಣ್ಣು ಮಕ್ಕಳು ಪ್ರೌಢವಸ್ಥೆ ತಲುಪಿದ ನಂತರ ತಮ್ಮ ಇಚ್ಛೆಯಂತೆ ಮದುವೆಯಾಗಬಹುದು: ಹರಿಯಾಣ ಕೋರ್ಟ್
ಚಂಡಿಗಢ: 18 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದರೂ ಪ್ರೌಢವಸ್ಥೆ ತಲುಪಿದ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಇಚ್ಛೆಯಂತೆ ಯಾರನ್ನ ಬೇಕಾದರೂ ಮದುವೆಯಾಗಲು ಸ್ವತಂತ್ರರು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಸ್ಲಿಂ ವೈಯಕ್ತಿಕ ಕಾನೂನು 195ನೇ ವಿಧಿ ಉಲ್ಲೇಖನದ ಅನ್ವಯ ಮತ್ತು ನ್ಯಾಯಾಲಯಗಳ ವಿವಿಧ ತೀರ್ಪುಗಳ ಆಧಾರದ ಮೇಲೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
2021ರಂದು 17 ವರ್ಷದ ಬಾಲಕಿ 36 ವರ್ಷದ ವ್ಯಕ್ತಿಯನ್ನು ಮುಸ್ಲಿಂ ವಿಧಿಯ ಪ್ರಕಾರ ಮದುವೆಯಾಗಿದ್ದರು. ಇದಕ್ಕೆ ಬಾಲಕಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದಂಪತಿ ಜೀವ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಪಂಜಾಬ್ ನ ಮುಸ್ಲಿಂ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲ್ಕಾ ಸರಿನ್ ಅವರು ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಪ್ರೌಢವಸ್ಥೆಯೆಂಬುದು 15 ವರ್ಷಕ್ಕೆ ಮೇಲ್ಪಟ್ಟದ್ದಾಗಿದ್ದರಿಂದ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಇಚ್ಛೆಯಂತೆ ಯಾರನ್ನ ಬೇಕಾದರೂ ಮದುವೆಯಾಗಬಹುದು ಎಂದು ಆದೇಶಿಸಿದ್ದಾರೆ.