ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಯುವ ಪ್ರೇಮಿಗಳ ಚುಂಬನ – ಫೋಟೋಗಳು ಜಾಲತಾಣದಲ್ಲಿ ಭಾರೀ ವೈರಲ್
. | ಮಂಡ್ಯ: ಪ್ರೀತಿ ಒಂದು ಪವಿತ್ರವಾದ ಸಂಬಧ. ಅದು ಎರಡು ಮನಸ್ಸುಗಳನ್ನು ಬೆಸೆಯುವ ಸುಂದರವಾದ ಅನುಬಂಧ. ಇಂತಹ ಪವಿತ್ರವಾದ ಪ್ರೀತಿಯ ಪಾವಿತ್ರ್ಯತೆಯನ್ನು ಕಾಪಾಡುವುದು ಪ್ರತೀ ಪ್ರೇಮಿಗಳ ಕರ್ತವ್ಯವಾಗಿರುತ್ತದೆ. ಪ್ರೇಮಿಗಳ ದಿನ ಸಮೀಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರೇಮಿಯೂ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕದಲ್ಲಿರುತ್ತಾರೆ. ಇನ್ನೊಂದು ವಾದದ ಪ್ರಕಾರ ನಿಜವಾದ ಪ್ರೇಮಿಗಳಿಗೆ ಪ್ರತಿದಿನವೂ ಪ್ರೇಮಿಗಳ ದಿನವೇ ಹೌದು ಈ ಮಾತು ಖಂಡಿತವಾಗಿಯೂ ನಿಜ…. ಪ್ರೇಮ ನಿವೇದನೆಗೆ, ತಮ್ಮ ತಮ್ಮ ಜೋಡಿಗಳಿಗೆ ಪ್ರೀತಿ ತೋರಿಸಲು ಯಾವುದೇ ಪ್ರತ್ಯೇಕ ದಿನದ ಅವಶ್ಯಕತೆ ಇಲ್ಲ. ಆದರೆ ಈ ಪ್ರೀತಿ ತೋರಿಸುವ ರೀತಿ, ಜಾಗ ಇವುಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಯಾಕೆಂದರೆ ನಾವು ವ್ಯಕ್ತ ಪಡಿಸುವ ಪ್ರೀತಿ ಇತರರಿಗೆ ಮುಜುಗರ ತರಿಸುವಂತಾಗಬಾರದು ಅಲ್ವಾ. ಆದರೆ ಪ್ರೀತಿಯ ಅಮಲಿನಲ್ಲಿರುವ ಯವ ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿ ಮೈಮರೆತ ಘಟನೆ ಮಂಡ್ಯದಲ್ಲಿ ನಡೆದಿದೆ. ಹೌದು.. ಮಂಡ್ಯದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಯುವ ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿಯೇ ಚುಂಬನದಲ್ಲಿ ಮೈಮರೆತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ. ಸಾರ್ವಜನಿಕರ ಪರಿವೇ ಇಲ್ಲದೇ ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡುತ್ತಿದೆ. ಅಲ್ಲದೆ, ಫೋಟೋ ನೋಡಿದಂತ ನೆಟ್ಟಿಗರು ಸಾರ್ವಜನಿಕ ಸ್ಥಳದಲ್ಲೇ ಯುವ ಪ್ರೇಮಿಗಳು ಚುಂಬಿಸಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಪ್ರೀತಿಯ ಅಮಲಲ್ಲಿ ಯುವ ಪ್ರೇಮಿಗಳು ಮೈಮರೆಯುತ್ತಾರೆ ಎನ್ನುವ ಮಾತು ಒಂದಿದೆ. ಇಲ್ಲೂ ಅದೇ ಆಗಿದೆ. ಇನ್ನು ಈ ಘಟನೆ ಸರಿಯೋ ತಪ್ಪೋ ಅನ್ನೋ ತರ್ಕ ಪಕ್ಕಕ್ಕಿಡೋಣ. ಏನೇ ಆದರೂ ಯುವ ಪ್ರೇಮಿಗಳು ತಮ್ಮ ಪ್ರೀತಿ ತೋರ್ಪಡಿಸುವ ರೀತಿ, ಹಾಗೂ ಅದಕ್ಕಾಗಿ ಆಯ್ಕೆ ಮಾಡಿಕೊಳ್ಳು ಜಾಗದ ಬಗ್ಗೆ ಕೊಂಚ ಎಚ್ಚರ ವಹಿಸಿದರೆ ತಮ್ಮ ಪ್ರೀತಿ ಇತರರ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಬಹುದು. ಮೊದಲೆ ಡಿಜಿಟಲ್ ಯುಗ ಇನ್ನು ಸಾರ್ವಜನಿಕ ಸ್ಥಳದಲ್ಲಿ ಇಂತಹ ಘಟನೆಗಳು ನಡೆದರೆ ಕೇಳಬೇಕೆ. |