ಕಾರ್ಕಳ: ಸರಕಾರಿ ಉದ್ಯೋಗ ಆಮಿಷ – ನಿವೃತ್ತ ಆರೋಗ್ಯ ಸಹಾಯಕಿಗೆ ಲಕ್ಷಾಂತರ ರೂ. ವಂಚನೆ

ಕಾರ್ಕಳ: ಸರಕಾರಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಜಯಮ್ಮ (64) ವಂಚನೆಗೆ ಒಳಗಾದವರು.

ಇವರು ನಿವೃತ್ತ ಕಿರಿಯ ಆರೋಗ್ಯ ಸಹಾಯಕಿಯಾಗಿದ್ದು ಅವರಿಗೆ 2019 ರಲ್ಲಿ ಬೆಳ್ತಂಗಡಿಯ ಮದುವೆ ಬ್ರೋಕರ್ ಲಕ್ಷ್ಮಿ ಹೊಳ್ಳ ಎಂಬುವವರ ಮುಖಾಂತರ ಮಂಗಳೂರು ಕೊಟೆಕ್ಯಾರ್ ನಿವಾಸಿ ಅಬ್ದುಲ್ ಖಾದರ್ ಎಂಬಾತ ಪರಿಚಯವಾಗಿದ್ದ. ಈತ ಜಯಮ್ಮ ಅವರ, ಇಬ್ಬರು ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ 9,60,000  ರೂ. ಹಣವನ್ನು ಬ್ಯಾಂಕ್ ಖಾತೆ ವರ್ಗಾವಣೆ ಮಾಡಿಸಿಕೊಂಡಿದ್ದು, ಇದರೊಂದಿಗೆ 5,00,000 ರೂ. ಹಣವನ್ನು ನೇರವಾಗಿ ಪಡೆದುಕೊಂಡಿದ್ದಾನೆ.

ಆದರೆ ಈ ವರೆಗೂ ಕೆಲಸವನ್ನೂ ಕೊಡಿಸದೆ ಇತ್ತ ಹಣವನ್ನೂ ವಾಪಾಸ್ಸು ನೀಡದೆ ವಂಚಿಸಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!