ಶಾಸಕ ರಘುಪತಿ ಭಟ್ ಸಹೋದರ ರವೀಂದ್ರ ಬಾರಿತ್ತಾಯ ನಿಧನ
ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ಸಹೋದರ ಸಾಂಗ್ಲಿಯ ಹೋಟೆಲ್ ಉದ್ಯಮಿ ಕೆ. ರವೀಂದ್ರ ಬಾರಿತ್ತಾಯ (60) ಅವರು ಬುಧವಾರ ಮುಂಜಾನೆ ನಿಧನ ಹೊಂದಿದ್ದಾರೆ.
ರವೀಂದ್ರ ಬಾರಿತ್ತಾಯರವರು ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಸಂದರ್ಭ ವಿಶೇಷ ಸೇವೆ ಸಲ್ಲಿಸಿದ್ದರು. ಬಾರಿತ್ತಾಯರ ನಿಧನಕ್ಕೆ ಕರಂಬಳ್ಳಿ ವೇಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ, ಕರಂಬಳ್ಳಿ ಫ್ರೆಂಡ್ಸ್, ವೇಂಕಟರಮಣ ಭಜನಾ ಮಂಡಳಿಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.
ಮೃತರು ತಾಯಿ, ಮೂವರು ಸಹೋದರರು, ಪತ್ನಿ , ಇಬ್ಬರು ಪುತ್ರಿಯರು ಓರ್ವ ಪುತ್ರನನ್ನು ಅಗಲಿದ್ದಾರೆ.