ತಪ್ಪು ಮಾಹಿತಿ, ಪ್ರಚೋದನಾಕಾರಿ ವಿಷಯ: 500ಕ್ಕೂ ಹೆಚ್ಚು ಟ್ವಿಟ್ಟರ್ ಅಕೌಂಟ್ ಗೆ ತಡೆ
ನವದೆಹಲಿ: ಟ್ವಿಟ್ಟರ್ ಸಂಸ್ಥೆ ಭಾರತ ಸರ್ಕಾರ ಪರಿಶೀಲಿಸಿದ ಕೆಲವು ಅಕೌಂಟ್ ಗಳನ್ನು ಭಾರತದೊಳಗೆ ಮಾತ್ರ ತಡೆಹಿಡಿದಿದೆ. ಆದರೆ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಕಾರಣಕ್ಕೆ ನಾಗರಿಕ ಸಮಾಜ ಕಾರ್ಯಕರ್ತರು, ರಾಜಕಾರಣಿಗಳು ಮತ್ತು ಮಾಧ್ಯಮ ವ್ಯಕ್ತಿಗಳ ಅಕೌಂಟ್ ಗಳನ್ನು ತಡೆಹಿಡಿದಿಲ್ಲ.
ಟ್ವಿಟ್ಟರ್ ಅಕೌಂಟ್ ಗಳ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉತ್ತೇಜಿಸುವುದಕ್ಕೆ ಒತ್ತು ನೀಡಿರುವ ಟ್ವಿಟ್ಟರ್ ಸಂಸ್ಥೆ, ಟ್ವಿಟರ್ ಮತ್ತು ಅದರಿಂದ ಪರಿಣಾಮ ಬೀರಿದ ಖಾತೆಗಳಿಗೆ ಭಾರತೀಯ ಕಾನೂನಿನಡಿ ಇರುವ ನಿರ್ಬಂಧ ಆಯ್ಕೆಗಳ ಬಗ್ಗೆ ಅನ್ವೇಷಿಸುತ್ತಿದೆ.
ದೆಹಲಿಯಲ್ಲಿ ರೈತರ ಪ್ರತಿಭಟನೆ ಬಗ್ಗೆ ಪ್ರಚೋದನಾಕಾರಿ ವಿಷಯಗಳನ್ನು ಮತ್ತು ತಪ್ಪು ಮಾಹಿತಿಗಳನ್ನು ಹಲವು ಅಕೌಂಟ್ ಗಳನ್ನು ತೆರೆದು ಹಂಚಿಕೊಳ್ಳುವವರ ಬಗ್ಗೆ ಮಾಹಿತಿ ಕಲೆಹಾಕುವಂತೆ ಸರ್ಕಾರ ಟ್ವಿಟ್ಟರ್ ಇಂಡಿಯಾ ಸಂಸ್ಥೆಗೆ ಸೂಚಿಸಿದೆ.
ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವ ಬಗ್ಗೆಯೂ ಎಚ್ಚರಿಕೆ ನೀಡಿದೆ. ಈ ಬಗ್ಗೆ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿರುವ ಸಂಸ್ಥೆ, ಸಮಾಜದಲ್ಲಿ ಹಾನಿಯನ್ನುಂಟುಮಾಡುವ ವಿಷಯಗಳನ್ನೊಳಗೊಂಡ ಹ್ಯಾಶ್ ಟಾಗ್ ಗಳನ್ನು ಹೊಂದಿರುವ ಟ್ವೀಟ್ ಗಳು ಕಡಿಮೆ ಗೋಚರವಾಗುವಂತೆ, ಅವು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗದಂತೆ ಮತ್ತು ಶಿಫಾರಸಿನ ಶೋಧ ನಿಯಮದಡಿ ಗೋಚರವಾಗುವಂತೆ ಮಾಡಲಾಗುವುದು ಎಂದು ಹೇಳಿದೆ.
ಟ್ವಿಟರ್ ತನ್ನ ಜಾರಿ ಕ್ರಮವನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ತಿಳಿಸಿದೆ.ಟ್ವಿಟ್ಟರ್ ನಿಯಮಗಳ ಉಲ್ಲಂಘನೆಗಾಗಿ ಕೆಲವು ಸಂದರ್ಭಗಳಲ್ಲಿ ಶಾಶ್ವತ ಅಮಾನತು ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಆದೇಶಗಳಲ್ಲಿ 500ಕ್ಕೂ ಹೆಚ್ಚು ಟ್ವಿಟ್ಟರ್ ಅಕೌಂಟ್ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿದೆ.
ಇಂದು ಕೆಲವು ಟ್ವಿಟ್ಟರ್ ಅಕೌಂಟ್ ಗಳನ್ನು ಭಾರತ ಸರ್ಕಾರದ ನೀತಿಯಡಿ ತಡೆಹಿಡಿಯಲು ನಿರ್ಧರಿಸಲಾಗಿದ್ದು, ಅವು ಭಾರತದ ಹೊರಗೆ ಸಿಗುತ್ತದೆ ಎಂದು ಟ್ವಿಟ್ಟರ್ ತಿಳಿಸಿದೆ. ಆದಾಗ್ಯೂ, ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬುದರ ವಿವರಗಳನ್ನು ಟ್ವಿಟ್ಟರ್ ಒದಗಿಸಿಲ್ಲ. ಸುದ್ದಿ ಮಾಧ್ಯಮ ಘಟಕಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳನ್ನು ಒಳಗೊಂಡಿರುವ ಖಾತೆಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟ್ವಿಟರ್ ಹೇಳಿದೆ. ನಾವು ತೆಗೆದುಕೊಳ್ಳಲು ನಿರ್ದೇಶಿಸಲಾಗಿರುವ ಕ್ರಮಗಳು ಭಾರತೀಯ ಕಾನೂನಿಗೆ ಅನುಗುಣವಾಗಿರುತ್ತವೆ ಮತ್ತು ಅದನ್ನು ಅನುಸರಿಸಿ ಸಂರಕ್ಷಿತ ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ತತ್ವಗಳನ್ನು ಅನುಸರಿಸಲಾಗುತ್ತದೆ ಎಂದರು.