ಮಾ.15-16: ಬ್ಯಾಂಕ್‌‌ ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್‌‌‌ ಉದ್ಯೋಗಿಗಳ ಸಂಘ ಕರೆ

ಹೈದರಾಬಾದ್: ಎರಡು ಸರ್ಕಾರ ಸ್ವಾಮ್ಯದ ಬ್ಯಾಂಕ್‌‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಬಜೆಟ್‌‌‌ ಪ್ರಸ್ತಾವಕ್ಕೆ ಬ್ಯಾಂಕ್‌‌ ಒಕ್ಕೂಟಗಳು ಮಾರ್ಚ್‌‌ 15ರಿಂದ ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಿವೆ. ಮಂಗಳವಾರ ಹೈದರಾಬಾದ್‌‌ನಲ್ಲಿ ನಡೆದ ಸಭೆಯಲ್ಲಿ, ಬ್ಯಾಂಕ್‌‌‌‌‌ಗಳನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಲು ತೀರ್ಮಾನವಾಗಿದೆ” ಎಂದು ಅಖಿಲ ಭಾರತ ಬ್ಯಾಂಕ್‌‌‌ ಉದ್ಯೋಗಿಗಳ ಸಂಘ ತಿಳಿಸಿದೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಹೇಳಿಕೆಯಲ್ಲಿ, ಐಡಿಬಿಐ ಹಾಗೂ ಎರಡು ಬ್ಯಾಂಕ್‌ಗಳ ಖಾಸಗೀಕರಣ, ಬ್ಯಾಡ್‌‌‌‌ ಬ್ಯಾಂಕ್‌‌ ಸ್ಥಾಪನೆ, ಎಲ್‌‌‌‌ಐಸಿಯಿಂದ ಹೂಡಿಕೆ ಹಿಂತೆಗೆದುಕೊಳ್ಳುವಿಕೆ ಸೇರಿದಂತೆ ಸುಧಾರಣ ಕ್ರಮಗಳ ಬಗ್ಗೆ ಬಜೆಟ್‌‌ನಲ್ಲಿ ಮಾಡಿದ ವಿವಿಧ ಪ್ರಕಟಣೆಗಳು ಚರ್ಚೆಯಲ್ಲಿವೆ ಎಂದು ಹೇಳಿದ್ದಾರೆ.

ಈ ಎಲ್ಲಾ ಕ್ರಮಗಳನ್ನು ವಿರೋಧಿಸಲು ತೀರ್ಮಾನ ಮಾಡಲಾಗಿದೆ. ಹಾಗಾಗಿ ಮಾರ್ಚ್‌‌ 15,16ರಂದು ಬ್ಯಾಂಕ್‌‌ ಮುಷ್ಕರಕ್ಕೆ ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದೆ. ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಮುಷ್ಕರಗಳನ್ನು ತೀರ್ಮಾನಿಸಲಾಗುವುದು” ಎಂದು ಹೇಳಿದೆ.”ಇದಲ್ಲದೆ, ಕೇಂದ್ರ ಸರ್ಕಾರವು ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಸಭೆ ಗಮನಕ್ಕೆ ತೆಗೆದುಕೊಂಡಿದ್ದು, ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!