ಕುಂದಾಪುರ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು
ಕುಂದಾಪುರ: (ಉಡುಪಿ ಟೈಮ್ಸ್ ವರದಿ)ನಿನ್ನೆ ರಾತ್ರಿ ಕುಂದಾಪುರ ಕೋಡಿ ಬೀಚ್ ರಸ್ತೆಯ ಚರ್ಚ್ ಬಳಿಯ ಮಾರುತಿ ಆಲ್ಟೊ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸೋಮವಾರ ರಾತ್ರಿ 10.30 ಸುಮಾರಿಗೆ ಮದ್ದುಗುಡ್ಡೆಯ ಕಿರಣ್ ಮೆಸ್ತಾ (24) ಮತ್ತು ರವೀಂದ್ರ ಕುಮಾರ್ (25) ಬೈಕ್ ನಲ್ಲಿ ಮನೆಕಡೆ ಹೋಗುತ್ತಿರುವ ಸಂದರ್ಭ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡದ ಸಂದರ್ಭ ಬೈಕ್ ಸವಾರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟು ತೀವೃ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮೃತರಲ್ಲಿ ಕಿರಣ್ ಮೆಡಿಕಲ್ ರೆಪ್ ಉದ್ಯೋಗಿಯಾಗಿದ್ದು, ರವೀಂದ್ರ ಉಡುಪಿಯ ಲಾಡ್ಜ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.