ಡಾ.ವಿದ್ಯಾ ಬಲ್ಲಾಳ್ ಕೆ. ಅವರಿಗೆ ಡಾಕ್ಟರೇಟ್

ಉಡುಪಿ: ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ವಿದ್ಯಾ ಬಲ್ಲಾಳ್ ಕೆ. ಅವರು ಮಂಡಿಸಿದ ಆನ್ ಎಕ್ಸ್‌ಪೆರಿಮೆಂಟ್ ಆಂಡ್ ಕ್ಲಿನಿಕಲ್ ಇವ್ಯಾಲ್ಯುವೇಷನ್ ಆಫ್ ದಿ ಯುಟಿಲಿಟಿ ಆಫ್ ಚರಕೋಕ್ತ ಪ್ರಜಾಸ್ಥಾಪನಾ ಗನ ಔಷಧೀಸ್ ಆಂಡ್ ಗರ್ಭಪಾಲ ರಸ ವಿದ್ ಸ್ಪೆಷಲ್ ರೆಫೆರೆನ್ಸ್ ಟು ಇಟ್ಸ್ ಆಂಟಿ ಎಬಾರ್ಟಿಪಿಷೆಂಟ್ ಯ್ಯಾಕ್ಟಿವಿಟಿ (An experiment and clinical evaluation of the utility of charakokta prajasthapana gana aushadhi’s and garbhapalarasa w.s.r. to its anti- abortificient activity) ಎನ್ನುವ ಮಹಾಸಂಶೋಧನಾ ಪ್ರಬಂಧಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ಡಾಕ್ಟರೇಟ್ ನೀಡಿ ಗೌರವಿಸಿದೆ.

ಡಾ. ಮಮತಾ ಕೆ.ವಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಅಧ್ಯಯನ ಮತ್ತು ಮಹಾಪ್ರಬಂಧ ಮಂಡಿಸಲಾಗಿದೆ. ಡಾ. ವಿದ್ಯಾ ಬಲ್ಲಾಳ್ ಕೆ. ಅವರು ಸರಕಾರಿ ಆಯುರ್ವೇದ ಕಾಲೇಜು, ಕೇರಳ ಇಲ್ಲಿ ಆಯುರ್ವೇದ ಪದವಿ ಪಡೆದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಉಡುಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಡಾ. ಕೆ.ಎಸ್.ಬಲ್ಲಾಳ್ ಇವರ ಪತ್ನಿಯಾಗಿರುತ್ತಾರೆ. ದಿ. ಸುಬ್ರಮಣ್ಯ ಆಚಾರ್ಯ ಮತ್ತು ದಿ. ರಾಜಲಕ್ಷ್ಮಿ ದಂಪತಿಯವರ ಪುತ್ರಿಯಾಗಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!