ಉಡುಪಿ: ಕೋವಿಡ್ ಲಸಿಕೆ ಪಡೆದುಕೊಂಡ ಜಿಲ್ಲಾಧಿಕಾರಿ, ಜಿ.ಪಂ ಸಿಇಓ
ಉಡುಪಿ: ಫ್ರಂಟ್ಲೈನ್ ವರ್ಕರ್ಸ್ ಳಿಗೆ ಕೋವಿಡ್ ಲಸಿಕೆ ವಿತಣಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ನವೀನ್ ಭಟ್, ಪೌರಾಯುಕ್ತ ಉದಯ ಶೆಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡರು.
ಈ ವೇಳೆ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಫ್ರಂಟ್ ಲೈನ್ ವರ್ಕರ್ಸ್ ಳಿಗೆ 100 ಶೇ. ಲಸಿಕಾ ವಿತರಣಾ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಉಡುಪಿಯಲ್ಲಿ ಎರಡು, ಕುಂದಾಪುರ ಒಂದು, ಕಾರ್ಕಳದಲ್ಲಿ ಒಂದು ಸೇರಿ ಒಟ್ಟು ೪ ಕಡೆಗಳಲ್ಲಿ ಲಸಿಕೆಯನ್ನು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿರು 4040 ಮಂದಿ ಫ್ರಂಟ್ಲೈನ್ ವರ್ಕರ್ಸ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಈ ಮೂರು ದಿನಗಳಲ್ಲಿ ಮಾಡಲಾಗುತ್ತದೆ. ಈ ಗುರಿ ಸಾಧನಗಾಗಿ ಇಂದು 593 ಮಂದಿಗೆ ಲಸಿಕೆ ನೀಡಬೇಕು ಎಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಆಯಾ ತಾಲೂಕಿನಲ್ಲಿ ತಹಶೀಲ್ದಾರರು, ಇಓಗಳು, ಸಿಪಿಐಗಳು,ಪೊಲೀಸ್ ಇನ್ಸ್ಪೆಕ್ಟರ್ಗಳು ಎಲ್ಲರೂ ಮುಂದೆ ನಿಂತು ಲಸಿಕೆಯನ್ನು ಪಡೆದುಕೊಳ್ಳಬೇಕು. ಇದರೊಂದಿಗೆ ನಮ್ಮೊಂದಿಗೆ ಹೋರಾಟ ಮಾಡಿದ ಫ್ರಂಟ್ ಲೈನ್ ವರ್ಕರ್ಸ್ ಳು ಎಲ್ಲರೂ ಲಸಿಕೆ ಯನ್ನು ಪಡೆದುಕೊಳ್ಳಬೇಕು ಎಂದರು.
ಇನ್ನು ಯಾವುದೇ ಸಂದರ್ಭದಲ್ಲಿ ಕೋವಿಡ್ ವಿರುದ್ಧದ ಹೋರಟಕ್ಕೆ ನಾವು ಸಿದ್ದರಿರಬೇಕು. ಆದ್ದರಿಂದ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ಕೋವಿಡ್ನಿಂದ ಉಂಟಾಗಬಹುದಾದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬೇಕು.
ಅನಾರೋಗ್ಯ, ಅಲರ್ಜಿಯಂತ ಸಮಸ್ಯೆ ಇರುವವರು ಲಸಿಕೆ ಪಡೆಯುವುದರಿಂದ ಹೊರಗುಳಿಯಬಹುದು, ಬಾಕಿ ಉಳಿದ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಇದುವರೆಗೆ ಕೋವಿಡ್ ಲಸಿಕೆಯಿಂದ ಯಾವುದೇ ರೀತಿಯ ಅಪಾಯವಾದಂತಹ ಘಟನೆಗಳು ನಡೆದಿಲ್ಲ. ಆದ್ದರಿಂದ ಸಾರ್ವಜನಿಕರು ಎಲ್ಲರೂ ಯಾವುದೇ ರೀತಿಯ ಭಯಪಡದೆ ಲಸಿಕೆ ಪಡೆದುಕೊಳ್ಳಬೇಕು. ಈ ಮೂಲಕ ಕೋವಿಡ್ನ ಅಪಾಯದಿಂದ ಪಾರಾಗಬೇಕು ಎಂದು ಮನವಿ ಮಾಡಿದರು.
ಫ್ರಂಟ್ಲೈನ್ ವರ್ಕರ್ಸ್ ಳಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೇ ಜಿಲ್ಲಾ ಪಂಚಾಯತ್ ಸಿಬ್ಬಂಧಿಗಳಿಗೆ, ಪೊಲೀಸರಿಗೆ, ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಯಾರು ಲಸಿಕೆ ಪಡೆಯಲಿದ್ದಾರೋ ಅವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಇನ್ನು ಮೊದಲ ಹಂತದ ಕೋವಿಡ್ ಲಸಿಕೆ ಪಡೆಯಲು ಹಲವರು ಬಾಕಿ ಉಳಿದರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ಆರೋಗ್ಯ ಕಾರ್ಯಕರ್ತರಲ್ಲಿ ಹೆಚ್ಚಿನ ಮಂದಿ ಮಹಿಳೆಯರೇ ಇರುವುದರಿಂದ ಇವರಲ್ಲಿ ಗರ್ಬಿಣಿಯರು, ಬಾಣಂತಿಯರು ಇದ್ದಾರೆ ಆದ್ದರಿಂದ ಲಸಿಕೆ ಪಡೆಯಲು ಅರ್ಹ ರಿರುವವರು ಈಗಾಗಲೇ ಪಡೆದುಕೊಂಡಿದ್ದಾರೆ. ಬಾಕಿ ಉಳಿದವರಿಗೆ ಫೆ.21ರ ವರೆಗೆ ಲಸಿಕೆ ಪಡೆಯಲು ಅವಕಾಶ ಇದ್ದು, ಈಗಾಗಲೇ ನಿರ್ಧರಿಸಿದಂತೆ ಮೊದಲ ಹಂತದ ಕೋವಿಡ್ ಲಸಿಕೆಯ ವಿತರಣೆಯಲ್ಲಿ 75% ಗುರಿ ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.