ಉಡುಪಿ ಕರಾವಳಿ ಯೂತ್ ಕ್ಲಬ್ 5ನೇ ವರ್ಷದ ಸಂಭ್ರಮಾಚರಣೆ: ಐವರಿಗೆ ಸಹಾಯಧನ ವಿತರಣೆ
ಉಡುಪಿ: ಕರಾವಳಿ ಯೂತ್ ಕ್ಲಬ್ ಇದರ 5ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮ ಕಡಿಯಾಳಿಯ ಕಾತ್ಯಾಯಿನಿ ಮಂಟಪದಲ್ಲಿ ಐದು ಜನ ಅಶಕ್ತ ಕುಟುಂಬಗಳಿಗೆ ಒಟ್ಟು 50 ಸಾವಿರ ಮೊತ್ತದ ಸಹಾಯಧನ ವಿತರಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಂತಹ ಬಾಳಿಗ ಆಸ್ಪತ್ರೆಯ ಡಾ. ಪಿ ವಿ ಭಂಡಾರಿ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ರುವಾರಿ ಅರ್ಜುನ್ ಭಂಡಾರ್ಕರ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಅಭಯಹಸ್ತ ಸಂಸ್ಥಾಪಕ ಸತೀಶ್ ಸಾಲ್ಯಾನ್, ಮುರಳಿಕೃಷ್ಣ ಹಾಗೂ ಸಂಸ್ಥೆಯ ಅಧ್ಯಕ್ಷ ಅಶೋಕ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಪ್ರಸ್ತಾವನೆ ನುಡಿಗಳನ್ನು ಮಾತನಾಡಿ ಸಂಸ್ಥೆಯು 5 ವರ್ಷದಿಂದ ನಡೆದು ಬಂದಂತಹ ಹಾದಿಯ ಬಗ್ಗೆ ವಿವರಿಸಿದರು. ಸಂಸ್ಥೆಯ ರಾಮಾಂಜಿ ಕಾರ್ಯಕ್ರಮದ ನಿರೂಪಿಸಿದರು.