ಅಂತರ್ಜಾಲ ಸೇವೆ ಸ್ಥಗಿತ – ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಂ.1: ಮಾಜಿ ಸಚಿವ ಮಹದೇವಪ್ಪ
ಬೆಂಗಳೂರು: ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮಹದೇವಪ್ಪ “ಭಾರತ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವಲ್ಲು ಅಗ್ರಸ್ಥಾನ ಪಡೆದಿದೆ. ಈ ಮೂಲಕ ಕುಖ್ಯಾತಿ ಗಳಿಸಿದೆ.” ಎಂದು ಟೀಕಿಸಿದ್ದಾರೆ.
“ಪ್ರಜಾಪ್ರಭುತ್ವದ ಹೆಸರಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವ ಮೂಲಕ ವಾಕ್ ಸ್ವಾತಂತ್ರ್ಯ ತಡೆಯುತ್ತಿದ್ದಾರೆ. ಇದು ಧರ್ಮಾಂಧತೆಯಲ್ಲವೆ? ಪ್ರಧಾನಿ ನರೇಂದ್ರ ಮೋದಿ ಅತ್ಯಂತ ದುರ್ಬಲ ಪ್ರಧಾನಿ, ಅವರ ಸರ್ಕಾರವು ಸತ್ಯಕ್ಕೆ ಅಂಜುತ್ತಿದೆ” ಎಂದು ಆರೋಪಿಸಿದ್ದಾರೆ.
“ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ವಾತಾವರಣದಲ್ಲಿ ನೀವೆಷ್ಟು ದುರ್ಬಲವಾಗಿ ಕಾಣಿಸುತ್ತೀದ್ದೀರಿ. ಫ್ಯಾಸಿಸಂಗೆ ಹೊದಿಕೆಯಾಗಿ ಧರ್ಮದ ಬಳಕೆ ನಿಲ್ಲಿಸಿ” ಎಂದು ಅವರು ಆಗ್ರಹಿಸಿದ್ದಾರೆ.