ಹಿರಿಯಡ್ಕ: ಮನೆಗೆ ನುಗ್ಗಿದ ಕಾರು – ಚಾಲಕ ಸಹಿತಇಬ್ಬರಿಗೆ ಗಾಯ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮನೆಗೆ ಡಿಕ್ಕಿ ಹೊಡೆದು ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಹಿರಿಯಡ್ಕದ ಕೊಂಡಾಡಿಯ ಭಜನೆಕಟ್ಟೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಹರಿಣ್ ಶೆಟ್ಟಿ ಗಂಭೀರ ಗಾಯಗೊಂಡಿರುವ ಕಾರು ಚಾಲಕ. ಘಟನೆ ವೇಳೆ ಅಲ್ಲಿಯೇ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೂ ಗಾಯವಾಗಿದೆ.

ಹರಿಣ್ ಶೆಟ್ಟಿ ಅವರು ಕಾರ್ಕಳದಿಂದ ಉಡುಪಿ ಕಡೆಗೆ ಬರುತ್ತಿದ್ದರು. ಈ ವೇಳೆ ಹಿರಿಯಡ್ಕದ ಕೊಂಡಾಡಿಯ ಭಜನೆಕಟ್ಟೆ ಸಮೀಪಿಸುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪುತ್ತು ನಾಯಕ್ ಎಂಬವರ ಮನೆಯ ಕಡೆಗೆ ನುಗ್ಗಿದೆ. ಮನೆಗೆ ಡಿಕ್ಕಿ ಹೊಡೆದ ಕಾರು ಮಗುಚಿ ಬಿದ್ದಿದ್ದು, ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮನೆಯ ಒಂದು ಭಾಗ ಸಂಪೂರ್ಣ ಕುಸಿದುಬಿದ್ದಿದೆ. ಕಾರಿನ ಮುಂಭಾಗವೂ ಜಖಂಗೊಂಡಿದ್ದು,ಗಾಯಾಳುವನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!