ಬಿಲ್ಲವ ಸಮುದಾಯಕ್ಕೆ ಅವಹೇಳನ: ಜಗದೀಶ್ ಅಧಿಕಾರಿ ಕ್ಷಮೆಯಾಚನೆ
ಮೂಡುಬಿದಿರೆ: ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ಬಿಲ್ಲವ ಸಮುದಾಯಕ್ಕೆ ಅವಹೇಳನಕಾರಿಯಾಗಿ ಮಾತನಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಬಿಲ್ಲವ ಸಂಘದ ಮುಂಡರು ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಆ ಕುರಿತಾಗಿ ಕೆ.ಪಿ ಜಗದೀಶ್ ಅವರು ಕ್ಷಮೆಯಾಚಿಸಿದ್ದಾರೆ.
ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಭಾರತೀಯ ಜನತಾ ಪಾರ್ಟಿಯಲ್ಲಿ ಇದ್ದರೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ದೊಡ್ಡ ಅಭಿಮಾನಿಯಾಗಿದ್ದೇನೆ, ಬಿಲ್ಲವ ಸಮಾಜಕ್ಕೆ ಯಾವುದೇ ರೀತಿಯ ಅಗೌರವ ತೋರಿಲ್ಲ. ಆದರೂ ಬಿಲ್ಲವ ಸಮಾಜ ಬಾಂಧವರಿಗೆ ನನ್ನಿಂದಾಗಿ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ” ಎಂದು ಹೇಳಿದ್ದಾರೆ.
ಈ ಕುರಿತಾಗಿ ಮಾತು ಮುಂದುವರೆಸಿದ ಅವರು, ಧರ್ಮ ಜಾತಿ ಪಂಗಡ ಭಾಷೆ ಸಂಸ್ಕೃತಿಯ ವಿಚಾರದಲ್ಲಿ ಭೇದಭಾವ ಮಾಡಿದವನಲ್ಲ. ಈ ವಿಷಯದಿಂದ ನನ್ನ ಮನಸ್ಸಿಗೆ ಅಗಾದ ನೋವುಂಟು ಮಾಡಿದೆ. ನಾನು ಸಲ್ಲೇಖನ ವ್ರತವನ್ನು ತೆಗೆದುಕೊಳ್ಳಲು ಯೋಚನೆ ಮಾಡುತ್ತಿದ್ದೇನೆ ಎಂದ ಅವರು, ದೇಹ ತ್ಯಾಗ ಮಾಡಲು ಸಿದ್ಧನಾಗಿರುವ ನಾನು ಮಾಡಿದ ತಪ್ಪಿಗೆ ಕ್ಷಮೆ ಎನ್ನುವುದು ಇಲ್ಲವೇ? ಎಂದು ಪ್ರಶ್ನಿಸಿ ಬಿಲ್ಲವ ಸಮಾಜ ಎಂಬುವುದು ನನ್ನ ಹೃದಯ ಭಾಗ ಅವರೊಂದಿಗೆ ಬೆಳೆದವ ಎಂದು ಹೇಳಿದ್ದಾರೆ.