ಬ್ರಹ್ಮಾವರ: ಫೆ.22ರಂದು ಮಿಯ್ಯಾರು ದೊಡ್ಮನೆ ಕುಟುಂಬಸ್ಥರ ನಾಗಮಂಡಲೋತ್ಸವ

ಉಡುಪಿ: ಬ್ರಹ್ಮಾವರದ  ಮಿಯ್ಯಾರು ದೊಡ್ಮನೆ ಕುಟುಂಬಸ್ಥರ ಮೂಲ ನಾಗಬನದ  ಚತುಃಪವಿತ್ರ ನಾಗಮಂಡಲೋತ್ಸವವು ಫೆ. 22ರಂದು ನಾಗದೇವರ ಸನ್ನಿಧಿಯಲ್ಲಿ ನಡೆಯಲಿದೆ ಎಂದು ಮಿಯಾರಿನ ಪ್ರವೀಣ ಕುಮಾರ್ ಶೆಟ್ಟಿ ಹೇಳಿದರು.

ಈ ಕುರಿತು ಉಡುಪಿಯಲ್ಲಿ ಮಾಹಿತಿ ನೀಡಿದ ಅವರು, ಚೇರ್ಕಾಡಿ ವೇದಮೂರ್ತಿ ಸುದರ್ಶನ ಸೂರ್ಯ ನಾಗಯಕ್ಷಿ ಪಾತ್ರಿಗಳ ನೇತೃತ್ವದಲ್ಲಿ ಹರಿಕೃಷ್ಣ ಉಡುಪರ ಮಾರ್ಗದರ್ಶನ ದಲ್ಲಿ  ಚತುಃಪವಿತ್ರ ನಾಗಮಂಡಲ ಸೇವೆಯನ್ನು ಹಾಗೂ ವಿವಿಧ ವೈದಿಕ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.     ನಾಗ ಮಂಡಲದ ಅಂಗವಾಗಿ ಫೆ. 20 ರಿಂದ ಫೆ 22 ರ ವರೆಗೆ ಮೂರು ದಿನಗಳ ಕಾಲ ಸಾಮೂಹಿಕ ಪ್ರಾರ್ಥನೆ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಫೆ. 21 ರಂದು ಶ್ರೀ ನಾಗದೇವರ ಪುನಃ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ತತ್ವ ಕಲಶ ಸ್ಥಾಪನೆ, ತತ್ವ ಹೋಮ ಅಭಿಷೇಕ ಮಹಾಪೂಜೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ. 22 ರಂದು ಚತುಃಪವಿತ್ರ ನಾಗಮಂಡಲ ಸೇವೆ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದ ಕಾರ್ಯಾಧ್ಯಕ್ಷರು ಹೆಬ್ರಿಯ ವಾದಿರಾಜ ಶೆಟ್ಟಿ, ಮಿಯಾರು ದೊಡ್ಮನೆ ರಘುರಾಮ್ ಶೆಟ್ಟಿ , ಕರುಣಾಕರ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಸುಕೇಶ್ ಶೆಟ್ಟಿ, ಅನ್ಸರ್ ಅಹಮದ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!