ಉಪನ್ಯಾಸಕ ಯಾದವ ವಿ. ಕರ್ಕೇರರಿಗೆ ಡಾಕ್ಟರೇಟ್
ಉಡುಪಿ: ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಉಡುಪಿ ತುಳುಕೂಟದ ಸದಸ್ಯ ಯಾದವ ವಿ.ಕರ್ಕೇರ ಅವರು ಮಂಡಿಸಿರುವ ಮಹಾಪ್ರಬಂಧ ಮೊಗವೀರ ಸಾಂಸ್ಕೃತಿಕ ಬದುಕು ಹಾಗೂ ಆರ್ಥಿಕ ಚಿಂತನೆ ಎಂಬ ವಿಷಯಕ್ಕೆ ಆಂಧ್ರಪ್ರದೇಶದ ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
ವಿಶ್ವವಿದ್ಯಾಲಯದ ತುಳು ಮತ್ತು ಅನುವಾದ ವಿಭಾಗದ ಮುಖ್ಯಸ್ಥ ಬಿ.ಎಸ್.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ತುಳುವಿನಲ್ಲಿ ಈ ಸಂಶೋಧನಾ ಮಹಾಪ್ರಬಂಧವನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.