ಮಣಿಪಾಲ: ವಿಶ್ವ ಕ್ಯಾನ್ಸರ್ ದಿನ 2021 – ವಿಶಿಷ್ಟ 3D ಕಲಾಕೃತಿ ಅನಾವರಣ

ಮಣಿಪಾಲ: ಕೆ.ಎಮ್.ಸಿ ವೈದ್ಯಕೀಯ ವಿಭಾಗ ಸಹಯೋಗದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬೆಟ್ಟು ರಚಿಸಿದ ಬೃಹತ್ ತ್ರಿ-ಡಿ ರಿಬ್ಬನ್ ಕಲಾಕೃತಿಯುನ್ನು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ.ಸುಮಾ ನಾಯರ್ ಅವರು ಇಂಟಾರಾಕ್ಟ್ ಬಿಲ್ಡಿಂಗ್ ನಲ್ಲಿ ಅನಾವರಣಗೊಳಿಸಿದರು.

ಭಾರತದಲ್ಲಿ ಚಾಲನೆಯಲ್ಲಿರುವ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಖಾಯಿದೆಯನ್ನು ಕೇಂದ್ರ ಸರಕಾರ ಪರಿಷ್ಕರಿಸಲು ಉದ್ದೇಶಿಸಿರುವುದು ಸ್ವಾಗತಾರ್ಹ . ತಂಬಾಕು ಬಳಕೆಯ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲು ಹೊಸ ಕಾಯ್ದೆ ಪೂರಕವಾಗಲಿದೆ. ಈ ದಿಸೆಯಲ್ಲಿ ಸಮುದಾಯ ವೈದ್ಯಕೀಯ ವಿಭಾಗ, ಕೆ ಎಂ ಸಿ ಮಣಿಪಾಲ ಕೋಟ್ಪಾ ತಿದ್ದುಪಡಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ ಎಂದು ಸಮುದಾಯ ವೈದ್ಯಕೀಯ ವಿಭಾಗದ ಡಾ.ಮುರಳೀಧರ್ ಕುಲಕರ್ಣಿ ತಿಳಿಸಿದರು.

ತಂಬಾಕು ಬಳಕೆ ಕ್ಯಾನ್ಸರ್‌ಗೆ ಕಾರಣವಾಗಿದೆ. ಆದ್ದರಿಂದ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಎಲ್ಲರೂ ಕ್ಯಾನ್ಸರ್ ಖಾಯಿಲೆಯ ಬಗ್ಗೆ ಹಾಗೂ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಆರೋಗ್ಯ ವೃದ್ಧಿಸೋಣ ಎಂದು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ.ಸುಮಾ ನಾಯರ್ ತಿಳಿಸಿದರು.

ಈ ಕಲಾಕೃತಿಯು ಕೆ.ಎಮ್.ಸಿ ಇಂಟರಾಕ್ಟ್ ಆವಾರಣ ದಲ್ಲಿ ಒಂದು ವಾರಗಳ ಕಾಲ ಪ್ರದರ್ಶನದಲ್ಲಿರುತ್ತದೆ.

Leave a Reply

Your email address will not be published. Required fields are marked *

error: Content is protected !!