“ಸಿರಿ ಗನ್ನಡ ಸೇವಾ ರತ್ನ” ಪ್ರಶಸ್ತಿಗೆ ಪವನ್ ಕುಮಾರ್ ಶಿರ್ವ ಆಯ್ಕೆ
ಉಡುಪಿ: ಜಿಲ್ಲೆಯ ಪವನ್ ಕುಮಾರ್ ಶಿರ್ವ ಅವರು ರಾಷ್ಟ್ರ ಮಟ್ಟದ “ಸಿರಿ ಗನ್ನಡ ಸೇವಾ ರತ್ನ” ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಫೆ.26 ರಂದು ಬೆಳಗಾವಿಯ ಸದಾಶಿವ ನಗರದ ಚಿಂದೋಡಿ ಲೀಲಾ ರಂಗ ಮಂದಿರದಲ್ಲಿ ನಡೆಯಲಿರುವ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪವನ್ ಕುಮಾರ್ ಶಿರ್ವ ಇವರಿಗೆ ಸಿರಿ ಗನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈಗಾಗಲೇ ಅತೀ ಕಿರಿಯ ವಯಸ್ಸಿನಲ್ಲಿ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಪವನ್ ಕುಮಾರ್, ಸಪ್ತ ಸ್ವರ ಸಂಗೀತ ಕಲಾ ಬಳಗ ಬೆಳಗಾವಿ, ಶ್ರೀ ಮುರ ಸಿದ್ದೇಶ್ವರ ಕಲಾ ಪೋಷಕ ಸಂಘ ಮುರಗುಂಡಿ ಇದರ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ಉಡುಪಿ ಜಿಲ್ಲೆಯ ಪವನ್ ಕುಮಾರ್ ಶಿರ್ವ ಅವರು ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.