51 ಸೈಲೆನ್ಸರ್‌ಗಳನ್ನು ಧ್ವಂಸಗೊಳಿಸಿದ ಮಣಿಪಾಲ ಪೊಲೀಸರು

ಮಣಿಪಾಲ: ಪ್ರತೀ ವರ್ಷದಂತೆ ಈ ವರ್ಷವೂ ಜ.18 ರಿಂದ ಫೆ.17ರವರೆಗೆ ಆಯೋಜಿಸಿವರು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ಮಣಿಪಾಲ ಪೊಲೀಸ್ ಠಾಣಾ ಸಿಬ್ಬಂದಿಯವರು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ವಿಷ್ಣುವರ್ಧನ್ ಹೇಳಿದ್ದಾರೆ.

ರಸ್ತೆ ಸುರಕ್ಷತಾ ಸಪ್ತಾಹದ ಅಡಿಯಲ್ಲಿ ‘ಸಡಕ್ ಸುರಕ್ಷಾ ಜೀವನ್ ರಕ್ಷಾ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಸುತ್ತಿರುವ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಕುರಿತಂತೆ ಮಾಹಿತಿ ನೀಡಿದ ಅವರು, ಕೇಂದ್ರ ಮೋಟಾರು ವಾಹನಗಳ ನಿಯಮಗಳಲ್ಲಿ ಸೂಚಿಸಿರುವ ಪರಿಮಾಣಕ್ಕಿಂತೆ ಹೆಚ್ಚಿನ ಕರ್ಕಶ ಶಬ್ದಗಳನ್ನು ಮಾಡುವ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ದ್ವಿಚಕ್ರ ವಾಹನ ಸವರರು ವಾಹನ ತಯಾರಿಕಾ ಕಂಪೆನಿಯಿ0ದ ಬರುವ ಸೈಲೆನ್ಸರ್‌ಗಳನ್ನು ಸ್ಥಳೀಯವಾಗಿ ಬದಲಾಯಿಸಿ ಮೋಡಿಫೈಡ್ ಸೈಲೆನ್ಸರ್‌ಗಳನ್ನು ಅಳವಡಿಸಿ ಶಬ್ದ ಮಾಲಿನ್ಯ ಮಾಡುತ್ತಾರೆ. ಮೊಟಾರು ವಾಹನ ಕಾಯ್ದೆಯಲ್ಲಿ ಈ ರೀತಿ ಮಾರ್ಪಾಡುಗಳನ್ನು ಮಾಡಿದರೆ 500 ರೂಪಾಯಿಂದ 2 ಸಾವಿರದ ವರೆಗೂ ದಂಡ ವಸೂಲಿ ಮಾಡಲು ಮತ್ತು ಮಾರ್ಪಾಡುಗೊಂಡ ಸಲಕರಣೆಗಳನ್ನು ವಶಪಡಿಸಿಕೊಳ್ಳಲು ಅವಕಾಶವಿರುತ್ತದೆ.

ಈ ರೀತಿಯ  ಶಬ್ದ ಮಾಲಿನ್ಯದಿಂದ  ಒತ್ತಡ, ಕಳಪೆ ಏಕಾಗ್ರತೆ, ನಿದ್ರಾಹೀನತೆ  ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯೆ ಇದೆ. ಆದ್ದರಿಂದ ಈ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇನ್ನು ಈ ಬಗ್ಗೆ ಮಾಹಿತಿ ನೀಡಿದ ಅವರು, ಜ. 1ರಿಂದ 31 ರ ವರೆಗೆ ಮಣಿಪಾಲ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು 50 ದ್ವಿಚಕ್ರ ವಾಹನ ಸವಾರ ಹಾಗೂ 1 ನಾಲ್ಕು ಚಕ್ರದ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ 25,500 ರೂ ದಂಡ ವಸೂಲಿ ಮಾಡಿ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸೈಲೆನ್ಸರ್‌ಗಳನ್ನು ವಾಹನ ಸವಾರರಿಗೆ ವಾಪಾಸು ನೀಡಿದರೆ ಅವರು ಅದನ್ನು ಮರುಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಪ್ರಾಯೋಗಿಕವಾಗಿ ಮಣಿಪಾಲ ಠಾಣೆಯಲ್ಲಿ ವಶಪಡಿಸಿಕೊಂಡ 51 ಸೈಲೆನ್ಸರ್‌ಗಳನ್ನು ಅನುಪಯುಕ್ತಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಈ ರೀತಿಯಾಗಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಎಲ್ಲಾ ಠಾಣೆಗಳಲ್ಲಿಯೂ ಮಾಡಲಾಗುವುದೆಂದು  ತಿಳಿಸಿದರು.

 ಈ ಸಂದರ್ಬ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಉಡುಪಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ್ ಸದಾನಂದ ನಾಯಕ್, ಮಣಿಪಾಲ ಪೊಲೀಸ್ ನಿರೀಕ್ಷಕ ಮoಜುನಾಥ್ ಎಂ, ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ, ಸುಧಾಕರ್ ತೋನ್ಸೆ ಮತ್ತು ಪ್ರೋ.ಪಿಎಸ್‌ಐಗಳಾದ ನಿರಂಜನ್ ಗೌಡ, ದೇವರಾಜ ಬಿರಾದಾರ, ಮತ್ತು ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!