ನಟಿ ರಾಧಿಕಾ ಕುಮಾರಸ್ವಾಮಿಗೆ ಮತ್ತೆ ಕಂಟಕ?
ಬೆಂಗಳೂರು: ವಂಚನೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ಯುವರಾಜನಿಂದ ನಟಿ ರಾಧಿಕಾ ಕುಮಾರಸ್ವಾಮಿ ಹಣ ಪಡೆದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಡಿದೆ. ಈ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ನಟಿ ರಾಧಿಕಾ ಕುಮಾರ ಸ್ವಾಮಿ ಅವರು, ಐತಿಹಾಸಿಕ ಕಥೆಯುಳ್ಳ ನಾಟ್ಯರಾಣಿ ಶಕುಂತಲೆ ಚಿತ್ರಕ್ಕಾಗಿ 75 ಲಕ್ಷ ರೂ. ಪಡೆದಿರೋದಾಗಿ ಹೇಳಿದ್ದರು.
ಆದರೆ, ಇದೀಗ ರಾಧಿಕಾ ಕುಮಾರಸ್ವಾಮಿ ಶಕುಂತಲೆ ಸಿನಿಮಾಗಾಗಿ ಬರೋಬ್ಬರಿ 1,25,00,000 ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಐತಿಹಾಸಿಕ ಕಥೆಯುಳ್ಳ ಚಿತ್ರಕ್ಕಾಗಿ ಹಣ ಪಡೆದಿರುವುದಾಗಿ ನಟಿ ಹೇಳಿಕೆ ನೀಡಿದ ಬೆನ್ನಲ್ಲೇ, ಸಿಸಿಬಿ ವಿಚಾರಣೆ ನಡೆಸಿ ಕೆಲ ಮಾಹಿತಿಯನ್ನ ಪಡೆದುಕೊಂಡಿತ್ತು. ಈ ವಿಚಾರವಾಗಿ ಯುವರಾಜ್ ಮತ್ತು ರಾಧಿಕಾ ಇಬ್ಬರನ್ನ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲಾಗಿದೆ ಎನ್ನಲಾಗುತ್ತಿದ್ದು, ಈ ವೇಳೆ ರಾಧಿಕಾ ಕುಮಾರ ಸ್ವಾಮಿ ಅವರು, ಬರೋಬ್ಬರಿ 1,25,00,000 ರೂಪಾಯಿ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.
ಸದ್ಯ, ಯುವರಾಜ್ ನಿಂದ ರಾಧಿಕಾ ಕುಮಾರಸ್ವಾಮಿ ಪಡೆದ ಹಣವನ್ನೆಲ್ಲಾ ಜಪ್ತಿ ಮಾಡಿರುವ ಸಿಸಿಬಿ ಪೊಲೀಸರು ನ್ಯಾಯಾಲಯದ ಸುಪರ್ದಿಗೆ ನೀಡಲು ಸಿದ್ಧತೆ ನಡೆಸಿದ್ದಾರೆ.ಅಲ್ಲದೆ ದೂರುದಾರನ ಖಾತೆಯಿಂದಲೇ ಹಣ ಬಂದಿದ್ದರಿಂದ ರಾಧಿಕಾ ಕುಮಾರಸ್ವಾಮಿ ಸಂಕಷ್ಟದಲ್ಲಿ ಸಿಲುಕಿಕೊಳ್ತಾರಾ ಅನ್ನೋ ಚರ್ಚೆಗಳು ಆರಂಭಗೊಂಡಿವೆ. ಇದೀಗ ಪತ್ತೆಯಾಗಿರುವ ಹೆಚ್ಚುವರಿ 50 ಲಕ್ಷ ರೂ.ಗಾಗಿ ಸಿಸಿಬಿ ಮತ್ತೊಮ್ಮೆ ರಾಧಿಕಾ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.