ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ?

ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸುವ ಕುರಿತಂತೆ  ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ವಿಧಾನ ಸಭಾ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂದೆ ಕುರಿತಂತೆ ಕಾಂಗ್ರೆಸ್ ಸದಸ್ಯೆ ಸೌಮ್ಯ ರೆಡ್ಡಿ ಮಾತನಾಡಿ, ಪೊಲೀಸ್ ಇಲಾಖೆ ಡ್ರಗ್ಸ್ ದಂದೆ ವಿರುದ್ಧ ಎರಡು ತಿಂಗಳು ಕಾರ್ಯಾಚರಣೆ ಮಾಡಿ ಮತ್ತೆ ಸುಮ್ಮನಾಗಿದೆ ಆದರೆ ರಾಜ್ಯದ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಇನ್ನೂ ನಡೆಯುತ್ತಲೇ ಇದೆ.

ಡ್ರಗ್ಸ್ ದಂದೆ ವಿರುದ್ಧದ ಕಾರ್ಯಾಚರಣೆ ಹಣ್ಣಿನ ಸೀಜನ್ ಥರ ಆಗದೆ ನಿರಂತರವಾಗಿ  ನಡೆಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಡ್ರಗ್ಸ್ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣಕ್ರಮ ಕೈಗೊಳ್ಳುತ್ತಿದೆ. ನಮ್ಮ ಕಾನೂನಿನಲ್ಲಿ ಕೆಲವು ಲೋಪದೋಷಗಳಿವೆ. ಕಳೆದ ಐದು ವರ್ಷದಲ್ಲಿ ಪತ್ತೆ ಹಚ್ಚಲಾಗದಷ್ಟು ಪ್ರಕರಣಗಳನ್ನು ಕೇವಲ 5 ತಿಂಗಳಲ್ಲಿ ಪತ್ತೆಹಚ್ಚಿ 2020ರಲ್ಲಿ 2786 ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಈ ಬಗ್ಗೆ ಮಾತು ಮುಂದುವರೆಸಿದ ಅವರು, ರಾಜ್ಯದ ಮಹಾನಗರಗಳಲ್ಲಿ ಹುಕ್ಕಾ ಬಾರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಹುಕ್ಕಾ ಬಾರ್‌ಗಳಿಗೆ ಅನುಮತಿ ನೀಡುತ್ತಿವೆ. ಅವುಗಳನ್ನು ನಿಷೇಧ ಮಾಡಲು ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಬೇಕು. ಬೇರೆ ರಾಜ್ಯಗಳಲ್ಲಿ ಹುಕ್ಕಾ ಬಾರ್ ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡು ರಾಜ್ಯದಲ್ಲಿಯೂ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!