ಕೋಳಿ ಅಂಕಕ್ಕೆ ದಾಳಿ: ವಶಪಡಿಸಿಕೊಂಡ 4 ಬೈಕ್ ಭಸ್ಮ
ತೀರ್ಥಹಳ್ಳಿ: ಕೋಳಿ ಅಂಕದ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನಗಳನ್ನು ಸಾಗಾಟ ಮಾಡುವಾಗ ಬೈಕ್ ಗಳು ದಾರಿ ಮಧ್ಯೆಯೇ ಸುಟ್ಟು ಭಸ್ಮವಾದ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಬಳಿ ಫೆ.1ರ ಸಂಜೆ ನಡೆದಿದೆ.
ಕೋಣಂದೂರಿನ ಕಾಡು ಮಾರ್ಗಗಗಳಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿ ಇದ್ದವರೆಲ್ಲಾ ಪರಾರಿಯಾಗಿದ್ದು. ಸ್ಥಳದಲ್ಲಿ ಇದ್ದ ಬೈಕ್ಗಳನ್ನು ವಶಪಡಿಸಿಕೊಂಡ ಪೊಲೀಸರು, ಬೈಕ್ ಗಳನ್ನು ಠಾಣೆಗೆ ತಂದರೇ ಆರೋಪಿಗಳು ತಾವಾಗಿಯೇ ಬರುತ್ತಾರೆ ಎಂದುಕೊಂಡು ಬೈಕ್ಗಳನ್ನ ಟಾಟಾ ಏಸ್ ವಾಹನದಲ್ಲಿ ತೀರ್ಥಹಳ್ಳಿ ಪಟ್ಟಣಕ್ಕೆ ಸಾಗಿಸಿದ್ದಾರೆ.
ಈ ವೇಳೆ ದಾರಿ ಮಧ್ಯೆ ವಾಹನದಿಂದ ಬೈಕ್ಗಳು ಜಾರಿ ಕೆಳಗೆ ಬಿದ್ದ ಪರಿಣಾಮ ಬೈಕ್ ಗಳಿಗೆ ಬೆಂಕಿ ಹೊತ್ತಿಕೊಂಡಿವೆ. ನಾಲ್ಕೈದು ಬೈಕ್ ಒಮ್ಮೆಲೆ ಬಿದ್ದಿದ್ದರಿಂದ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ನಾಲ್ಕೂ ಬೈಕ್ಗಳು ಸುಟ್ಟು ಭಸ್ಮವಾಗಿವೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತೀರ್ಥಹಳ್ಳಿ ಪೊಲೀಸರು, ಬೈಕ್ಗಳು ಕೆಳಗೆ ಬಿದ್ದು ಸುಟ್ಟಿವೆ, ಬೈಕ್ ಮಾಲೀಕರಿಗೆ ವಿಮೆ ಕಟ್ಟಿರುವ ದಾಖಲೆಗಳನ್ನ ತರಲು ಹೇಳಿದ್ದೇವೆ. ಪರಿಹಾರ ಕೊಡಿಸುತ್ತೇವೆ ಎಂದು ತಿಳಿಸಿದ್ದಾರೆ.