ಬೈಂದೂರು: ಹಳಿ ದಾಟುತ್ತಿದ್ದ ಕಪ್ಪು ಚಿರತೆಗೆ ರೈಲು ಡಿಕ್ಕಿ
ಬೈಂದೂರು: ನಾಡಾ ಗ್ರಾಮ ಬಡಾಕೆರೆ ರೈಲ್ವೆ ಮೇಲ್ವೇತುವೆ ಬಳಿ ಮಂಗಳವಾರ ಬೆಳಗಿನ ಜಾವ ರೈಲು ಡಿಕ್ಕಿ ಹೊಡೆದು ನಾಲ್ಕು ವರ್ಷದ ಕಪ್ಪು ಚಿರತೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆಹಾರ ಹುಡುಕಿ ಬಂದಿರುವ ಚಿರತೆಗೆ ರೈಲ್ವೆ ಮೇಲ್ವೇತುವೆ ಬಳಿ ರೈಲು ಬರುತ್ತಿರುವಾಗ ತಪ್ಪಿಸಿಕೊಳ್ಳಲು ಆಗದಿರುವುದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಸಿಬ್ಬಂದಿ ಚಿರತೆ ಶವ ವಶಕ್ಕೆ ಪಡೆದು ವನ್ಯಜೀವಿ ನಿಯಮದ ಪ್ರಕಾರ ಅಂತಿಮ ಸಂಸ್ಕಾರ ಮಾಡಿದರು.