ಕೊಡವೂರು: ಫೆ.4 ರಂದು ರಾಶಿ ಪೂಜಾ ಮಹೋತ್ಸವ – ಹಸಿರು ಹೊರೆಕಾಣಿಕೆ ಸಮರ್ಪಣೆ
ಮಲ್ಪೆ: ಕೊಡವೂರಿನ ಶಂಕರನಾರಾಯಣ ದೇವಸ್ಥಾನದಲ್ಲಿ ಫೆ.4 ರಂದು ನಡೆಯಲಿರುವ ರಾಶಿಪೂಜಾ ಮಹೋತ್ಸವದ ಪ್ರಯುಕ್ತ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು.
ಮಲೈ ಅಯ್ಯಪ್ಪಸ್ವಾಮಿ ಮಂದಿರದಿಂದ ಹೊರಟ ವೈಭವಾದ ಹೊರೆ ಕಾಣಿಕೆ ಮೆರವಣಿಗೆಗೆ ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಅವರು ಚಾಲನೆ ನೀಡಿದರು.
ದೇವಸ್ಥಾನಕ್ಕೆ ಸಾಗಿದ ಮೆರವಣಿಗೆಯುದ್ದಕ್ಕೂ ಕೀಲು ಕುದುರೆ, ಕುಣಿತ ಭಜನೆ, ಕುಣಿತ ಚಂಡೆ, ನಾಸಿಕ್ ಬ್ಯಾಂಡ್, ವಿವಿಧ ವೇಷ ಭೂಷಣ, ಕಲಶ ಹಿಡಿದ ಮಹಿಳೆಯರು, ಕಲಾ ಪ್ರಕಾರಗಳು ಸಾಗಿ ಬಂದವು.
ಈ ಸಂದರ್ಭದ ರಾಶಿಪೂಜೆ ಉತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ ಜನಾರ್ದನ್ ಕೊಡವೂರು, ಅಡಿಗ ಕೃಷ್ಣ ಮೂರ್ತಿ ಭಟ್, ಭಾಸ್ಕರ ಪಾಲನ ಬಾಚನಬೈಲು, ಸುಧಾ ಎನ್. ಶೆಟ್ಟಿ ರಾಜ ಎ. ಸೇರಿಗಾರ, ಚಂದ್ರಕಾಂತ್ ಪುತ್ರನ್, ನಗರಸಭಾ ಸದಸ್ಯ ವಿಜಯ ಕೊಡವೂರು, ಭಕ್ತವೃಂದದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಾವತಿ ಎಸ್, ಸಾಲ್ಯಾನ್, ರಾಶಿಪೂಜಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಭಜನ ಮಂಡಳಿಗಳು, ಸಂಘ ಸಂಸ್ಥೆಗಳು, ಮಹಿಳಾ ಮಂಡಳಿಗಳು ಸೇರಿದಂತೆ ಮೀನುಗಾರ ಮುಖಂಡರು, ಪ್ರಮುಖ ಗಣ್ಯರು ಹಾಗೂ ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.