ಉಡುಪಿ: ದ್ವಿಚಕ್ರ ವಾಹನ ಸ್ಕೀಡ್ -ಯುವಕ ಸ್ಥಳದಲ್ಲೇ ಸಾವು
ಉಡುಪಿ: ರಾಪ್ಟ್ರೀಯ ಹೆದ್ದಾರಿ ಸಂತೆಕಟ್ಟೆ ಸೇತುವೆ ಬಳಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಯುವಕನೊರ್ವ ಸ್ಥಳದಲ್ಲೇ ಮೃತ ಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ಮೃತ ಯುವಕ ಕೊಳಲಗಿರಿಯ ಆಸೀಫ್(19) ಎಂಬಾತ ನಿನ್ನೆ ರಾತ್ರಿ ಉಡುಪಿ ಕಡೆಯಿಂದ ಕೊಳಲಗಿರಿಗೆ ಹೊಂಡಾ ಆಕ್ಟೀವಾದಲ್ಲಿ ಹೋಗುತ್ತಿರುವ ಸಂದರ್ಭ ಸಂತೆಕಟ್ಟೆ ಸೇತುವೆಯಲ್ಲಿ ದ್ವಿಚಕ್ರ ವಾಹನ ಸ್ಕೀಡ್ ಆಗಿತ್ತು. ಇದರ ಪರಿಣಾಮ ಆಸೀಫ್ ಸೇತುವೆಯ ತಡೆಗೋಡೆಗೆ ಎಸೆಯಲ್ಪಟ್ಟು ತೀವೃ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ಬ್ರಹ್ಮಾವಾರ ಪೊಲೀಸರು ತಿಳಿಸಿದ್ದಾರೆ.