ಪಡುಕೆರೆ ಮರೀನಾ ನಿರ್ಮಾಣ: ಎಚ್ಚರಿಕೆಯ ಕರೆ ಗಂಟೆಯ ಬ್ಯಾನರ್ ಪ್ರತ್ಯಕ್ಷ!

ಉಡುಪಿ: ಪಡುಕರೆಯಲ್ಲಿ ಮರೀನಾ ಬೀಚ್ ನಿರ್ಮಾಣ ಕುರಿತಂತೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಡುಕೆರೆ ಕಡಲ ತೀರದಲ್ಲಿ ಮರೀನಾ ನಿರ್ಮಾಣಕ್ಕೆ ಅವಕಾಶ ನೀಡಲಾರೆವು ಎಂದು ತಮ್ಮ ನಿರ್ಧಾರವನ್ನೂ ಈಗಾಗಲೇ ಹೇಳಿದ್ದಾರೆ.

ಮತ್ತೊಂದೆಡೆ ಮರೀನಾ ಬೀಚ್ ನಿರ್ಮಾಣದ ಸಾಧಕ ಭಾದಕಗಳ ಅಧ್ಯಯನಗಳೂ ನಡೆಯುತ್ತಿದೆ. ಈ ನಡುವೆ ಮರೀನಾ ಬೀಚ್ ಮಿರ್ಮಾಣಕ್ಕೆ ಮುಂದಾಗುರುವವರಿಗೆ ಎಚ್ಚರಿಕೆಯ ಬ್ಯಾನರ್ ಒಂದನ್ನು ಪಡುಕೆರೆಯಲ್ಲಿ ಅಳವಡಿಸಲಾಗಿದೆ.  

ಈ ಬ್ಯಾನರ್‌ನಲ್ಲಿ ನಿಲ್ಲಿ….. ನೀವು ಮರೀನಾ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಕ್ಕಾಗಿ ಊರಿನ ಒಳಗೆ ಬರುತ್ತಿರುವುದಾದರೆ ದಯವಿಟ್ಟು ವಾಪಾಸ್ ಹೋಗಿ. ಮರೀನಾ ನಿರ್ಮಾಣಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂಬ ಊರಿನ ನಿರ್ಣಯವನ್ನು ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಿದ್ದೇವೆ…

ನೀವು ಈ ಎಚ್ಚರಿಕೆಯನ್ನು ಮೀರಿ ಊರಿನೊಳಗೆ ಬಂದರೆ ಮುಂದೆ ನಡೆಯಬಹುದಾದ ಯಾವ ಪ್ರತಿಕ್ರಿಯೆಗಳಿಗೂ ನಾವು ಜವಬ್ದಾರರಲ್ಲ ಎಂಬ ಎಚ್ಚರಿಕೆಯನ್ನು ಬರವಣಿಗೆ ರೂಪದಲ್ಲಿ ತಿಳಿಸಲಾಗಿದೆ.

ಈ ಬ್ಯಾನರ್‌ನ್ನು ಊರಿನ ಜನರ ಪರವಾಗಿ ಮಲ್ಪೆ ಪಡುಕೆರೆಯ ಸರ್ವ ಸಂಸ್ಥೆಗಳ ಒಕ್ಕೂಟ ಅಳವಡಿಸಿದ್ದು ಪಡುಕೆರೆಯಲ್ಲಿ ಮರೀನಾ ನಿರ್ಮಾಣಕ್ಕೆ ಮುಂದಾಗುವವರಿಗೆ ಎಚ್ಚರಿಕೆಯ ಕರೆ ಗಂಟೆಯ ಧ್ವನಿಯನ್ನು ಸಾರುತ್ತಿದೆ.

Leave a Reply

Your email address will not be published. Required fields are marked *

error: Content is protected !!