ಉಡುಪಿ ಯಶೋದಾ ಆಟೋ ಚಾಲಕರ ಮತ್ತು ಮಾಲಕರ ಸಂಘ: ಸಮವಸ್ತ್ರ ವಿತರಣೆ
ಉಡುಪಿ: ಯಶೋದಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿದ ಜಿಲ್ಲಾ ಅಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಮುತುವರ್ಜಿ ಮತ್ತು ನೇತೃತ್ವದಲ್ಲಿ ಚಿಟ್ಪಾಡಿ ಡಯಾನ ಟ್ಯಾಕೀಸ್ ಎದುರುಗಡೆ ಇರುವ ಆಟೋ ನಿಲ್ದಾಣದ ಆಟೋ ಚಾಲಕರಿಗೆ ಸಮವಸ್ತ್ರವನ್ನು ವಿತರಿಸಿದರು.
ಈ ಸಂದರ್ಭ ಯುವರಾಜ್ ಪುತ್ತೂರು ಮತ್ತು ಯಶೋದಾ ಆಟೋ ಯೂನಿಯನ್ನ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ತಾಲೂಕು ಅಧ್ಯಕ್ಷರಾದ ಹರೀಶ್ ಅಮೀನ್, ಶ್ರೀನಿವಾಸ್ ಕಪ್ಪೆಟ್ಟು ಕೃಷ್ಣರಾಜ ಕೊರಂಗ್ರಪಾಡಿ, ನಾಗರಾಜ್ ಕಾಮತ್, ರವಿ ಸೇರಿಗಾರ್ ಮತ್ತು ಡಯಾನಾ ನಿಲ್ದಾಣದ ಜೋಸೆಫ್, ನಸ್ರುಲ್ಲಾ, ಸಂದೀಪ್, ಮೊಹಮದ್ ಶಾನ್, ಸಲೀಂ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.