ಕಾರ್ಕಳ: ನಿಯಂತ್ರಣ ತಪ್ಪಿ ಆನೆಕೆರೆಗೆ ಉರುಳಿದ ಕಾರು

ಕಾರ್ಕಳ: ನಿಯಂತ್ರಣದ ತಪ್ಪಿದ ಕಾರೊಂದು ಕಾಲುವೆಗೆ ಬಿದ್ದ ಘಟನೆ ಕಾರ್ಕಳದಲ್ಲಿ ಜ.31ರ ತಡರಾತ್ರಿ ನಡೆದಿದೆ. ಕೇರಳ ನೋಂದಣಿಯ ಇದಾಗಿದ್ದು ವಿದ್ಯಾರ್ಥಿಯೊಬ್ಬನಿಗೆ ಸೇರಿದ್ದೆನ್ನಲಾಗಿದೆ.

ಈ ಕಾರು ರವಿವಾರ ಕಾರ್ಕಳದ ಹೊಟೇಲ್ ವೊಂದರ ಮುಂಭಾಗದಲ್ಲಿತ್ತು ಎನ್ನಲಾಗಿದ್ದು, ಆ ಬಳಿಕ ತಡರಾತ್ರಿ ಅಲ್ಲಿಂದ ಹೊರಟು ಹೋದ ಕೆಲವೇ ಹೊತ್ತಿನಲ್ಲಿ ಘಟನೆ ಸಂಭವಿಸಿದೆ. ವಿದ್ಯಾರ್ಥಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿದ್ದರಿಂದ ಆನೆಕೆರೆ ಕಾಲುವೆಗೆ ಉರುಳಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾರ್ಕಳ ನಗರ  ಪೊ ಲೀಸರು ಭೇಟಿ  ನೀಡಿ ಪರಿಶೀಲನೆ ನಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!