ಕುಂದಾಪುರ: ಮಕ್ಕಳಿಲ್ಲದ ಕೊರಗು – ಗೃಹಿಣಿ ಆತ್ಮಹತ್ಯೆ
ಕುಂದಾಪುರ: ಹೊಳೆಗೆ ಹಾರಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಂಗಂ ಡಂಪಿಂಗ್ ಯಾರ್ಡ್ ಬಳಿಯ ಪಂಚಗಂಗಾವಳಿ ಹೊಳೆಯಲ್ಲಿ ನಡೆದಿದೆ. ಶಾರದಾ (57) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.
ಇವರು ಮಕ್ಕಳಿಲ್ಲ ಎಂಬ ಕಾರಣಕ್ಕೆ ಹಾಗೂ ಗಂಡ ಮೃತಪಟ್ಟ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ನಡುವೆ ಜ.30 ರಂದು ಹೊರಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಮನೆಗೆ ವಾಪಾಸು ಮನೆಗೆ ಬಾರದೆ ಇದ್ದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಜ. 31 ರಂದು ಶಾರಾದ ಅವರ ಮೃತದೇಹ ಪಂಚಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿದೆ.
ಶಾರದಾ ಅವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.