ಗಂಗೊಳ್ಳಿ: ವಿಷ ಜಂತು ಕಚ್ಚಿ ವ್ಯಕ್ತಿಯ ಸಾವು

ಗಂಗೊಳ್ಳಿ: ವಿಷ ಜಂತುವೊಂದು ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.

ಶಂಕರ ಶೆಟ್ಟಿ(56) ಮೃತಪಟ್ಟವರು. ಇವರು ಜ. 16 ರಂದು ರಾತ್ರಿ ಹಕ್ಲಾಡಿ ಬಯಲಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ವಿಷ ಜಂತು ಕಚ್ಚಿದೆ. ಈ ವೇಳೆ ಅಸ್ವಸ್ಥರಗಿದ್ದ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ಜ.31 ರಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!