ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ.24 ರಿಂದ ಜೂನ್ 10ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಮೇ. 24ರಂದು ಭೌತಶಾಸ್ತ್ರ ಮತ್ತು ಇತಿಹಾಸ, ಮೇ 25ರಂದು ಮೈನಾರಿಟಿ ಲ್ಯಾಂಗ್ವೇಜಸ್, ಮೇ. 26 ಬೇಸಿಕ್ ಮ್ಯಾತ್ಸ್ ಮತ್ತು ಲಾಜಿಕ್ ಹೋಮ್ ಸೈನ್ಸ್, ಮೇ.27 ಗಣಿತ, ಐಚ್ಛಿಕ ಕನ್ನಡ, ಅಕೌಂಟೆನ್ಸಿ ಮೇ. 28 ಉರ್ದು, ಮೇ. 29 ರಾಜ್ಯ ಶಾಸ್ತ್ರ, ಮೇ 31 ರಸಾಯನ ಶಾಸ್ತ್ರ ಪರೀಕ್ಷೆಗಳು ನಡೆಯಲಿದೆ.
ಜೂನ್1ರಂದು ಕರ್ನಾಟಕ ಸಂಗೀತ, ಜೂನ್ 2 ರಂದು ಸೈಕಾಲಜಿ , ಬಯಾಲಜಿ ಎಕ್ಟ್ರಾನಿಕ್ಸ್, ಕಂಪ್ಯೂಟರ್ ಸೈಯನ್ಸ್, ಜೂನ್ 3 ರಂದು ಹಿಂದಿ, ಜೂನ್ 4ರಂದು ಅರ್ಥಶಾಸ್ತ್ರ, ಜೂನ್ 5ರಂದು ಕನ್ನಡ (ಪ್ರಥಮ ಭಾಷೆ), ಜೂನ್ 7 ರಂದು ಇಂಗ್ಲೀಷ್ (ದ್ವಿತೀಯ ಭಾಷೆ), ಜೂನ್ 10 ರಂದು ಭೂಗೋಳ ಶಾಸ್ತ್ರ ಪರೀಕ್ಷೆಗಳು ನಡೆಯಲಿದೆ.