ಉಡುಪಿ: ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾಗಿ ಇಬ್ರಾಹಿಮ್ ಸಾಹೆಬ್ ಕೋಟ ಆಯ್ಕೆ

ಉಡುಪಿ: ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಇಬ್ರಾಹಿಮ್ ಸಾಹೆಬ್ ಕೋಟ ಆಯ್ಕೆಯಾಗಿದ್ದಾರೆ. ಜ.28ರಂದು ನಡೆದ ಒಕ್ಕೂಟದ ಮಹಾ ಸಭೆಯಲ್ಲಿ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಒಕ್ಕೂಟದ ಅಧ್ಯಕ್ಷರಾಗಿ ಬಹುಮತದಿಂದ ಆಯ್ಕೆ ಮಾಡಲಾಯಿತು.

ಅವರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಕ್ಕೂಟದ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಜಮಿಯ್ಯತುಲ್ ಫಲಾಹ್ ಸಂಘಟನೆಯ ಮಂಗಳೂರು ಮತ್ತು ಉಡುಪಿ  ದ್ವಿಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅವರು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 ಇದೇ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಜಿಲ್ಲಾ ಸಮಿತಿಯ ಸದಸ್ಯರನ್ನೂ ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿಯ ಸದಸ್ಯರಾಗಿ ಮುಹಮ್ಮದ್ ಯಾಸೀನ್ ಮಲ್ಪೆ, ಇದ್ರೀಸ್ ಹೂಡೆ, ಹುಸೈನ್ ಬೆಂಗ್ರೆ, ಇಕ್ಬಾಲ್ ಎಸ್ ಕಟಪಾಡಿ, ಮುಹಮ್ಮದ್ ಮೌಲಾ ಉಡುಪಿ, ಶಾಭಾನ್ ಹಂಗ್ಳೂರು ಮತ್ತು ಹಸನ್ ಮಾವಾಡ್ ಬೈಂದೂರು ಕೇಂದ್ರೀಯ ಮಟ್ಟದಲ್ಲಿ ಆಯ್ಕೆಯಾದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳೆಂಬ ನೆಲೆಯಲ್ಲಿ ಎಂ. ಪಿ. ಮೊಯ್ದಿನಬ್ಬ ಪಡುಬಿದ್ರೆ, ಅಬೂಬಕರ್ ನೇಜಾರ್, ಶೇಖ್ ಅಬ್ದುಲ್ಲತೀಫ್ ಮದನಿ, ಎಂ. ಶಬ್ಬೀರ್ ಮಲ್ಪೆ, ಖಾಲಿದ್ ಮಣಿಪುರ ಮತ್ತು ಖಮ್ರುದ್ದೀನ್ ಎಂ.  ಆರಿಸಲ್ಪಟ್ಟರು‌.

ತಾಲೂಕುವಾರು ಮಟ್ಟದಲ್ಲಿ ಉಡುಪಿ ತಾಲೂಕಿನಿಂದ  ಶೇಖ್ ಸಲಾಹುದ್ದೀನ್ ಅಬ್ದುಲ್ಲಾ , ಅಬ್ದುಲ್ ಅಝೀಝ್ ಉದ್ಯಾವರ, ಖತೀಬ್ ರಶೀದ್ ಮಲ್ಪೆ, ಟಿ. ಎಂ. ಝಫ್ರುಲ್ಲಾ ನೇಜಾರು, ವಿ. ಎಸ್. ಉಮರ್ ಉಡುಪಿ, ಕಾಸಿಮ್ ಬಾರ್ಕೂರು, ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಹಾಗೂ ಇಕ್ಬಾಲ್ ಮನ್ನಾ ನಾಯರ್ ಕೆರೆ, ಕುಂದಾಪುರ ತಾಲೂಕಿನಿಂದ ಬಿಎಸೆಫ್ ರಫೀಕ್ ಗಂಗೊಳ್ಳಿ, ರಿಯಾಝ್ ಕೋಡಿ, ಮೌಲಾನ ಝಮೀರ್ ಅಹ್ಮದ್ ರಶಾದಿ, ಎಸ್. ಎಸ್. ಹನೀಫ್ ಗುಲ್ವಾಡಿ ಹಾಗೂ ಅಬೂ ಮುಹಮ್ಮದ್ ಮುಜಾವರ್, ಬೈಂದೂರು ತಾಲೂಕಿನಿಂದ ಶಮ್ಸ್ ತಬ್ರೇಝ್ ನಾಗೂರು, ಮಣೆಗಾರ್ ಜಿಫ್ರಿ ಶೀರೂರು, ಫಯಾಝ್ ಅಲಿ ಬೈಂದೂರು, ಮುಹಮ್ಮದ್ ಸಿದ್ದೀಕ್ ಎಚ್ಚೆಸ್ ಹಾಗೂ ಮನ್ಸೂರ್ ಇಬ್ರಾಹಿಮ್ ನಾವುಂದ ಆಯ್ಕೆಯಾದರು.

ಕಾರ್ಕಳ ತಾಲೂಕಿನಿಂದ ಅಶ್ಫಾಕ್ ಅಹ್ಮದ್ ಕಾರ್ಕಳ, ಮುಹಮ್ಮದ್ ಗೌಸ್ ಮಿಯಾರ್, ಮುಹಮ್ಮದ್ ಶರೀಫ್ ಬಂಗ್ಲೆಗುಡ್ಡೆ, ನಾಸಿರ್ ಶೈಖ್ ಬೈಲೂರು ಮತ್ತು ಅಬ್ದುಲ್ ಸಮದ್ ಖಾನ್, ಕಾಪು ತಾಲೂಕಿನಿಂದ ಇಸ್ಮಾಯಿಲ್ ಹುಸೈನ್ ಕಟಪಾಡಿ, ಅನ್ವರ್ ಅಲಿ ಕಾಪು,  ಎಸ್. ಪಿ. ಉಮರ್ ಫಾರೂಕ್, ಶಭಿ ಅಹ್ಮದ್ ಖಾಝಿ ಹಾಗೂ ಮುಹಮ್ಮದ್ ಇಕ್ಬಾಲ್, ಬ್ರಹ್ಮಾವರ ತಾಲೂಕಿನಿಂದ ತಾಜುದ್ದೀನ್ ಇಬ್ರಾಹಿಮ್ ಉಪ್ಪಿನಕೋಟೆ, ಮುಹಮ್ಮದ್ ಆಸಿಫ್, ಇಕ್ಬಾಲ್ ಕುಂಜಾಲು, ಎಚ್. ಎ. ರಹ್ಮಾನ್ ಹಂಗಾರಕಟ್ಟೆ ಹಾಗೂ ಹಾರೂನ್ ರಶೀದ್ ಸಾಸ್ತಾನ ಆಯ್ಕೆಯಾದರು. 

ಬ್ರಹ್ಮಾವರ ಸಿಟಿ ಸೆಂಟರ್ ನ ಚಂದನ್ ಸಭಾಂಗಣದಲ್ಲಿ ಸಭೆ ನಡೆಯಿತು. ಒಕ್ಕೂಟದ  ಅಧ್ಯಕ್ಷರಾದ ಯಾಸೀನ್ ಮಲ್ಪೆ ಅಧ್ಯಕ್ಷೀಯ ಭಾಷಣ ಮಾಡಿ, ಚುನಾವಣಾ ಪ್ರಕ್ರಿಯೆ ಕುರಿತು ಮಾರ್ಗದರ್ಶನ ನೀಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ದ್ವೈವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಇಕ್ಬಾಲ್ ಎಸ್. ಕಟಪಾಡಿ ದ್ವೈವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ಚುನಾವಣಾ ಮೇಲ್ವಿಚಾರಕರಾಗಿ ಜನಸೇವಾ ಸೌಹಾರ್ದ ಸಹಕಾರಿ ಸೋಸೈಟಿಯ ಉಪನಿರ್ದೇಶಕರಾದ ಅತೀಕುರ್ರಹ್ಮಾನ್ ವಾನಂಬಾಡಿ, ಚುನಾವಣಾ ವೀಕ್ಷಕರಾಗಿ ವಾರ್ತಾ ಭಾರತಿಯ ವ್ಯವಸ್ಥಾಪಕರಾದ ಮುಹಮ್ಮದ್ ಮುಸ್ಲಿಮ್ ಕೊಪ್ಪ ಹಾಗೂ ಮುಖ್ಯ ಅತಿಥಿಯಾಗಿ ಮಜ್ಲಿಸ್ ಎ ಇಸ್ಲಾಹ್ ವ ತಂಝೀಮ್ ಭಟ್ಕಳದ ಉಪಾಧ್ಯಕ್ಷರಾದ ಇನಾಯತುಲ್ಲಾ ಶಾಬಂದ್ರಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!