ಮೀನುಗಾರರ ಸಾಲಮನ್ನಾ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ
ಉಡುಪಿ: ಮೀನುಗಾರರು ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ಮೂಲಕ 2017-18, 2018-19 ರ ಸಾಲಿನಲ್ಲಿ ಶೇ.2ರ ಬಡ್ಡಿ ದರದಲ್ಲಿ ಮತ್ತು 2018-19ರ ಸಾಲಿನಲ್ಲಿ ಶೂನ್ಯ ಬಡ್ಡಿದರದಲ್ಲಿ ಪಡೆದ ಸಾಲ ಮರುಪಾವತಿಗೆ ಬಾಕಿ ಇರುವ ಮೊತ್ತವನ್ನು ರಾಜ್ಯ ಸರ್ಕಾರವು ಮನ್ನಾ ಮಾಡಿದ್ದು, ಭೂಮಿ ಕೋಶದಲ್ಲಿ ಸಿದ್ಧಪಡಿಸಿದ ಹಸಿರು ಪಟ್ಟಿ ಪ್ರಕಾರ ಕೆಲವು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆಯಾಗಿರುತ್ತದೆ.
ಸಾಲ ಖಾತೆಗೆ ಪಾವತಿಯಾಗದೇ ಹಿಂತಿರುಗಿ ಬಂದ ಫಲಾನುಭವಿಗಳಿಗೆ ಮತ್ತು ಆಧಾರ್ ದೃಢೀಕೃತಗೊಂಡು ಆಧಾರ್ ಖಾತೆಯಲ್ಲಿರುವ ಹೆಸರು ತಾಳೆಯಾಗದೇ ಇರುವ, ನಿಯಮಾನುಸಾರ ಸಾಲಮನ್ನಾ ಪ್ರಯೋಜನ ಪಡೆಯಲು ಅರ್ಹರಿರುವ ಫಲಾನುಭವಿಗಳ ಕುರಿತು ಕ್ರಮವಹಿಸುವ ಬಗ್ಗೆ ಮೀನುಗಾರಿಕಾ ನಿರ್ದೇಶನಾಲಯದಿಂದ ವೇಳಾಪಟ್ಟಿ ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಾಹಿತಿಯನ್ನು ಫಲಾನುಭವಿಗಳು ಮತ್ತು ಬ್ಯಾಂಕ್ ಶಾಖೆಗಳ ಮ್ಯಾನೇಜರ್ಗಳಿಗೆ ನೀಡಲಾಗಿದೆ.
ಹಸಿರು ಪಟ್ಟಿ ಆಗದ ಫಲಾನುಭವಿಗಳ ಪಟ್ಟಿಗಾಗಿ ಇಲಾಖಾ ವೆಬ್ಸೈಟ್ fisheries.karnataka.gov.in ನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.