ಪಡುಬಿದ್ರೆ: ಸೈಕಲ್‌ಗೆ ಗೂಡ್ಸ್ ಟೆಂಪೋ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು
ಪಡುಬಿದ್ರೆ: ಗೂಡ್ಸ್ ಟೆಂಪೋವೊಂದು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರೆಯ ರಾ.ಹೆ.ಯಲ್ಲಿ ನಡೆದಿದೆ. ಶ್ಯಾಮ ಟಿ ಪೂಜಾರಿ(74) ಅಪಘಾತದಲ್ಲಿ ಮೃತಪಟ್ಟವರು.
ಇವರು ಜ.20 ರಂದು ಎಂದಿನಂತೆ ತಮ್ಮ ಮನೆಯಿಂದ ಪಡುಬಿದ್ರಿ ಕಲ್ಸಂಕ ಎಂಬಲ್ಲಿರುವ ಹಾಲಿನ ಡೈರಿಗೆ ಹಾಲನ್ನು ಕೊಡಲು ಸೈಕಲ್ ನಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ವೇಳೆ, ತೆಂಕ ಎರ್ಮಾಳಿನ ಧೂಮಾವತಿ ದೈವಸ್ಥಾನದ ಎದುರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗವಾಗಿ ಬಂದ ಟೆಂಪೋ ಸೈಕಲ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಎಸೆಯಲ್ಪಟ್ಟಿದ್ದ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.