ಪಡುಬಿದ್ರೆ: ‘ಅಪ್ನಾ ವಿಲೇಜ್ ಮಾರ್ಟ್’ ಸೂಪರ್ ಮಾರ್ಕೆಟ್ ಶುಭಾರಂಭ
ಪಡುಬಿದ್ರೆ: ನಗರದ ಜನತೆಗೆ ಎಲ್ಲಾ ಅಗತ್ಯ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ನೀಡುವ ಉದ್ದೇಶದಿಂದ ಶುಭಾರಂಭಗೊಂಡಿದೆ ಅಪ್ನಾ ವಿ ಕೇರ್ ಎಂಟರ್ಪ್ರೈಸಸ್ ಪ್ರೈವೆಟ್ ಲಿಮಿಟೆಡ್ನ ‘ಅಪ್ನಾ ವಿಲೇಜ್ ಮಾರ್ಟ್’ ಸೂಪರ್ ಮಾರ್ಕೆಟ್ ನ್ನು ಡೈಜಿ ವರ್ಲ್ಡ್ ಮೀಡಿಯಾದ ಮಾಲಕರಾದ ವಾಲ್ಟರ್ ನಂದಳಿಕೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಹಾಸ್ಯ ನಟ ಅರವಿಂದ್ ಬೋಳಾರ್ ಅವರು ಮಾತನಾಡಿ, ಇಲ್ಲಿ ಗ್ರಾಹಕರಿಗೆ ಬೇಕಾದ ಎಲ್ಲಾ ಬಗೆಯ ವಸ್ತುಗಳು ಸಿಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದು ಶುಭಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಡುಬಿದ್ರೆಯ ಬ್ರಹ್ಮಸ್ಥಾನದ ಪಿ.ಜಿ ನಾರಾಯಣ ರಾವ್, ಪಡುಬಿದ್ರೆ ಮಸೀದಿಯ ಖತೀಬ್ ಜನಾಬ್ ಹಾಜಿ ಎಸ್ಎಮ್ ಅಬ್ದುಲ್ ಹಮೀದ್ ಮದಾನಿ, ಪಲಿಮಾರಿನ ಸಂತ ಪಿಯೂಸ್ ಚರ್ಚಿನ ಧರ್ಮಗುರುಗಳಾದ ವಂ. ಡಾ. ರೋಕ್ ಡಿಸೋಜಾ, ಎರ್ಮಾಳ್ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ವಂ. ರೊನಾಲ್ಡ್ ಮಿರಂದಾ, ಮಾಜಿಸಚಿವರಾದ ವಿನಯ್ ಕುಮಾರ್ ಸೊರಕೆ ಉಪಸ್ಥಿತರಿದ್ದರು.
ವಿಶಾಲವಾದ ಸೂಪರ್ ಮಾರ್ಕ್ಟ್ನಲ್ಲಿ ದಿನಬಳಕೆ ವಸ್ತುಗಳು, ಬೇಬಿ ಕೇರ್, ಬ್ಯೂಟಿ ಕಾಸ್ಮೆಟಿಕ್, ಸ್ಕಿನ್ ಕೇರ್ , ಹಣ್ಣುಗಳು ಮತ್ತು ತರಕಾರಿಗಳು, ಟಾಯ್ಸ್, ಚಾಕಲೇಟ್ಸ್ ಮೊದಲಾದ ಹತ್ತುಸಾವಿರಕ್ಕೂ ಮಿಕ್ಕಿದ ವಸ್ತುಗಳು ಒಂದೇ ಸೂರಿನಡಿ ಗ್ರಾಹಕರಿಗೆ ದೊರೆಯಲಿದೆ.