ಕಾರ್ಕಳ: ವಿದ್ಯಾಪೋಷಕ ವಿದ್ಯಾರ್ಥಿನಿ ಮನೆಗೆ ವಿದ್ಯುತ್ ಸಂಪರ್ಕ
ಉಡುಪಿ: ವಿದ್ಯಾಪೋಷಕ ವಿದ್ಯಾರ್ಥಿನಿ ದೀಕ್ಷಾಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಇಂದು ಮೆಸ್ಕಾಂ ಅಧಿಕಾರಿ ಎಸ್. ಗಣರಾಜ ಭಟ್ ಉದ್ಘಾಟಿಸಿದರು.
ಪ್ರಥಮ ಪಿ.ಯು.ಸಿ ವಿದ್ಯಾರ್ಜನೆಗೈಯುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ದೀಕ್ಷಾಳ (ಎಸ್.ಎಸ್.ಎಲ್.ಸಿ 94%)ಕಾರ್ಕಳದ ಹಿರ್ಗಾನದಲ್ಲಿರುವ ಮನೆಗೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಪದಾಧಿಕಾರಿಗಳಾದ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಪಿ. ದಿನೇಶ್ ಪೂಜಾರಿ, ಅಶೋಕ್ ಎಂ. ತೆರಳಿ ಆಕೆಯ ಚಿಕ್ಕಾದಾದ ಮನೆಯನ್ನು ಪರಿಶೀಲಿಸಿದರು. ಅತಿ ಶೀಘ್ರದಲ್ಲಿ ಮನೆಗೆ ಶೌಚಾಲಯವನ್ನು ನಿರ್ಮಿಸಿಕೊಡುವ ಭರವಸೆಯನ್ನು ಸಂಸ್ಥೆಯ ಅಧ್ಯಕ್ಷರು ಈ ಸಂದರ್ಭದಲ್ಲಿ ನೀಡಿದರು.
ವಿದ್ಯುತ್ ಸಂಪರ್ಕಕ್ಕೆ ನೆರವು ನೀಡಿದ ಶ್ರೀನಿವಾಸ ಹೆಬ್ಬಾರರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲಾಯಿತು.ಈಗಾಗಲೇ ಪ್ರಥಮ ಪಿ. ಯು. ಸಿ.ಯ ಈರ್ವರು ವಿದ್ಯಾರ್ಥಿನಿಯರಿಗೆ ಸೆಲ್ಕೋ ಸಂಸ್ಥೆ ಸೋಲಾರ್ ದೀಪಗಳನ್ನು ಅಳವಡಿಸಿದೆ.