ಶ್ರೀಕೃಷ್ಣ ಮಠ: ನಾಳೆ ‘ವಿಶ್ವಪಥ’ ಉದ್ಘಾಟನೆಗೆ ಸಿಎಂ ಯಡಿಯೂರಪ್ಪ

ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಅದಮಾರು ಮಠ ಉಡುಪಿ ವತಿಯಿಂದ ಪರ್ಯಾಯ ಪಂಚ ಶತಮಾನೋತ್ಸವ(500 ವರ್ಷ)ದ ಅಂಗವಾಗಿ ಜ. 18 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದು, ದೇವರ ದರ್ಶನಕ್ಕೆ ಭಕ್ತರು ತೆರಳುವ ನೂತನವಾಗಿ ನಿರ್ಮಿಸಿದ ವಿಶ್ವಪಥ ಸರತಿ ಸಾಲನ್ನು ಸಿಎಂ ಉದ್ಘಾಟಿಸಲಿದ್ದಾರೆ ಎಂದು ಶ್ರೀ ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

ಅವರು ಭಾನುವಾರ ಮಠದಲ್ಲಿ ಕರೆದ ಮಾತನಾಡಿ, ಅಂದು ಸಂಜೆ 5 ಗಂಟೆಗೆ ಸಿಎಂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ವಿಶ್ವಪಥವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5.15 ಕ್ಕೆ ದೇವರ ದರ್ಶನ, ಸಾವಯವ ಉತ್ಪನ್ನ ಹಾಗೂ ಉಡುಪಿ ಸೀರೆಯನ್ನು ಹೊಂದಿರುವ ಉಡುಪಿ ಸಾವಯವ ಮಳಿಗೆಯನ್ನು ಈ ಸಂದರ್ಭ ಸಿಎಂ ಲೋಕಾರ್ಪಣೆ ಮಾಡಲಿದ್ದಾರೆ. ಸಂಜೆ 5.30 ಕ್ಕೆ ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆಯಲ್ಲಿ ನಡೆಯುವ ಸಾಧಕರಿಗೆ ಸನ್ಮಾನ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಶ್ರೀಗಳು, ಅದಮಾರು ಹಿರಿಯ ಶ್ರೀಗಳು, ಪರ್ಯಾಯ ಶ್ರೀಗಳು ಭಾಗವಹಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಬಿ.ವೈ. ರಾಘವೇಂದ್ರ, ಶಾಸಕ ಕೆ. ರಘುಪತಿ ಭಟ್ ಭಾಗವಹಿಸಲಿದ್ದಾರೆ ಎಂದರು.

ಭವ್ಯ ಮೆರವಣಿಗೆ:

 ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವ ಸಂಭ್ರಮಾಚರಣೆಯನ್ನು ಮತ್ತೊಮ್ಮೆ ಕಟ್ಟಿಕೊಡುವ ಹಾಗೂ 500 ವರ್ಷದ ನೆನಪಿಗಾಗಿ ಪರ್ಯಾಯ ಮೆರವಣಿಗೆಯಂತೆ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಮೇನೆಯಲ್ಲಿ ಶ್ರೀಮನ್ಮಧ್ವಾಚಾರ್ಯರ ಹಾಗೂ ಶ್ರೀವಾದಿರಾಜ ಶ್ರೀಪಾದರ ಕೃತಿಗಳೊಂದಿಗೆ ಜೋಡುಕಟ್ಟೆಘಿ, ಡಯಾನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕುಪೇಟೆ ಮಾರ್ಗವಾಗಿ ರಥಬೀದಿಗೆ ಶೋಭಾಯಾತ್ರೆ ಪ್ರವೇಶಿಸಲಿದೆ. ಜನಪದ ಕಲಾ ತಂಡ, ನೃತ್ಯ ಕಲಾ ತಂಡಗಳು, ಮಲ್ಲಕಂಬ, ಲಕ್ಷ್ಮೀ ಶೋಭಾನೆ, ಶ್ರೀ ಮಠದ ಬಿರುದುಬಾವಳಿ, ಘಂಟೆ, ಜಾಗಟೆ, ಶಂಖ ನಾದನದ ವೈಭವವೂ ಇದೆ ಎಂದರು.

ಮೆರವಣಿಗೆ ಯೂನಿಯನ್ ಬ್ಯಾಂಕ್ ಆ್ ಇಂಡಿಯಾದ ಎಂ.ಡಿ ಹಾಗೂ ಸಿಇಒ ರಾಜಕಿರಣ್ ರೈ, ಹೊಸಪೇಟೆ ಉದ್ಯಮಿ ಪಿ. ಪ್ರಭಾಕರ ಶೆಟ್ಟಿ ಚಾಲನೆ ನೀಡಲಿದ್ದಾರೆ. ನೂರಾರು ಸಂಖ್ಯೆ ಭಕ್ತರು ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ. ಪರ್ಯಾಯ ಪಂಚಶತಮಾನೋತ್ಸವವು ಒಂದು ಐತಿಹಾಸಿಕ ಕ್ಷಣವಾಗಲಿದೆ ಎಂದು ವಿವರಿಸಿದರು.

ಶ್ರೀಕೃಷ್ಣ ಮಠದ ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಮುಕ್ತ ಪ್ರವೇಶಕ್ಕೆ ಅವಕಾಶವಿಲ್ಲ. ನಮ್ಮಲ್ಲಿ ಶ್ರೀಕೃಷ್ಣ ದರ್ಶನಕ್ಕೆ ಸುದರ್ಶನ ಪಾಸ್ ಪಡೆದುಕೊಂಡಿರುವ ಭಕ್ತರಿಗಷ್ಟೇ ಅವಕಾಶ ಕಲ್ಪಿಸಿದ್ದೇವೆ. ಕಾರ್ಯಕ್ರಮದಲ್ಲಿ 500 ಮಂದಿ ಭಾಗವಹಿಸಬಹುದೆಂದು ಗೋವಿಂದರಾಜ್ ತಿಳಿಸಿದರು.

ಶ್ರೀಕೃಷ್ಣ ಮಠದ ಸಾರ್ವಜನಿಕ ಸಂಪರ್ಕಾಕಾರಿ ಶ್ರೀಶ ಭಟ್ ಕಡೆಕಾರ್, ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕರಾದ ವೈ.ಎನ್. ರಾಮಚಂದ್ರ ರಾವ್, ಸಂತೋಷ್ ಕುಮಾರ್, ಪುರುಷೋತ್ತಮ್ ಅಡ್ವೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!