ಶಿರ್ವ: ಅಂಗನವಾಡಿ ಕೇಂದ್ರಕ್ಕೆ ಶುದ್ದ ಕುಡಿಯುವ ನೀರಿನ ಯಂತ್ರ ಹಸ್ತಾಂತರ
ಉಡುಪಿ: ಸಮಾಜ ಸೇವಕ ಕೊಡುಗೈ ದಾನಿ ಪವನ್ ಕುಮಾರ್ ಶಿರ್ವ ವತಿಯಿಂದ ಶಿರ್ವ ಅಂಗನವಾಡಿ ಕೇಂದ್ರಕ್ಕೆ ಶುದ್ದ ಕುಡಿಯುವ ನೀರಿನ ಯಂತ್ರ, ಧ್ವಜಸ್ತಂಭ ಹಾಗೂ ಬಾಗಿಲು ಸೇರಿ ಸುಮಾರು 50000 ಮೊತ್ತದ ವಸ್ತುಗಳನ್ನು ಕೇಂದ್ರಕ್ಕೆ ಹಸ್ತಾಂತರಿಲಾಯಿತು.
ಈ ವೇಳೆ ಸಮಾಜ ಸೇವಕ ಪವನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ನ ಆಡಳಿತಾಧಿಕಾರಿ ಡಾ.ಅರುಣ್ ಹೆಗ್ಡೆ, ಮಾಜಿ ಅಧ್ಯಕ್ಷ ವಾರಿಜ ಪೂಜಾರ್ತಿ, ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ತಾಲೂಕು ಪಂಚಾಯತ್ ಸದಸ್ಯೆ ಗೀತಾ ವಾಗ್ಳೆ, ಗ್ರಾಮ ಕರಣಿಕ ವಿಜಯ್, ಮಾಜಿ ಸದಸ್ಯ ಸುನೀಲ್ ಕಾಬ್ರಲ್, ರೋಟರಿ ಅಧ್ಯಕ್ಷ ವಿಷ್ಣುಮೂರ್ತಿ ಸರಳಾಯ ಹಾಗೂ ಅಂಗನವಾಡಿ ಮುಖ್ಯ ಶಿಕ್ಷಕಿ ಸುನೀತಾ ಪೂಜಾರಿ ಹಾಗೂ ಸಹ ಶಿಕ್ಷಕಿ ಪ್ರಭಾ, ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರು ಉಪಸ್ಥಿತರಿದ್ದರು.